ಮಕ್ಕಳಲ್ಲಿ ಶಿಕ್ಷಣದ ಕುತೂಹಲ ಮೂಡಿಸಿ

ಯಲಬುಗಾ ಹಿರೇವಂಕಲಕುಂಟಾ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಗ್ರಾಪಂ ಹಾಗೂ ಅಜಿಂ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಬಾಲ ಸಂಭ್ರಮ (ಚಿಣ್ಣರ ಚಿಲಿಪಿಲಿ ಅಂಗಳ) ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಆಯುಷ್ ವೈದ್ಯಾಧಿಕಾರಿ ಟಿ.ಜೆ.ಘಾಟಗೆ, ಎನ್‌ಅರ್‌ಎಲ್‌ಎಂ ಎಂಬಿಕೆ ಗಿರಿಜಾ ಕೆರಿ, ವಲಯ ಮೇಲ್ವಿಚಾರಕಿಯರಾದ ಮಾಧವಿ, ಗಿರಿಜಾ ಕಡಿವಾಲರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಾಲ
  • ಸಂಭ್ರಮ
  • ಕಾರ್ಯಕ್ರಮ
ಯಲಬುರ್ಗಾ: ಬಾಲ ಸಂಭ್ರಮವು ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಸಂತೋಷ ಕಲಿಕೆಯನ್ನು ಉತ್ತೇಜಿಸಲು ಸರ್ಕಾರವು ಜಾರಿಗೊಳಿಸಿರುವ ಒಂದು ಶೈಕ್ಷಣಿಕ ಉಪಕ್ರಮವಾಗಿದೆ ಎಂದು ಸಿಡಿಪಿಒ ಬೆಟದೇಶ ಮಾಳೆಕೊಪ್ಪ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಗ್ರಾಪಂ ಹಾಗೂ ಅಜಿಂ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ ಸಂಭ್ರಮ (ಚಿಣ್ಣರ ಚಿಲಿಪಿಲಿ ಅಂಗಳ) ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕುತೂಹಲ ಮೂಡಿಸುವುದು, ವಿಜ್ಞಾನದ ತಿಳಿವಳಿಕೆ ನೀಡುವುದು ಮತ್ತು ಕಲಿಕೆಯನ್ನು ಆನಂದದಾಯಕವಾಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ವಲಯ ಮೇಲ್ವಿಚಾರಕಿ ಲಲಿತಾ ನಾಯ್ಕರ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು, ಅಂಗನವಾಡಿ ದಾಖಲಾತಿ ಹೆಚ್ಚಿಸುವುದು ಮತ್ತು ಪಾಲಕರಿಗೆ ಅಂಗನವಾಡಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರಗಳು ಗ್ರಾಮೀಣ ಮಕ್ಕಳ ಕಲಿಕೆಯ ಉತ್ತೇಜನಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಶಾಸ್ತ್ರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಬಾಬುಸಾಬ ಲೈನದಾರ, ಮುಖಂಡ ಗಾಳೆಪ್ಪ ಓನಜಹಳ್ಳಿ , ಬಾಲಪ್ಪ ಗಚ್ಚಿನಮನಿ, ಅಜಿಂ ಪ್ರೇಮ್‌ಜಿ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿಗಳಾದ ಜೀವನ್, ಕಾವ್ಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net