ಆಂಜನೇಯ ಶಿಲಾಮೂರ್ತಿ ಪ್ರತಿಷ್ಠಾಪನೆ

ತಾವರಗೇರಾದ ದರ್ಗಾ ಮುಂದಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಆಂಜನೇಯ ಶಿಲಾಮೂರ್ತಿ.
ತಾವರಗೇರಾದ ದರ್ಗಾ ಮುಂದಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಆಂಜನೇಯ ಶಿಲಾಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • 200 ವರ್ಷಗಳ ಐತಿಹಾಸಿಕ ದೇವಸ್ಥಾನ
  • ಅನ್ನಸಂತರ್ಪಣೆ
ತಾವರಗೇರಾ: ಸಮೀಪದ ಶಾಮೀದಲಿ ದರ್ಗಾದ ಮುಂದಿನ 200 ವರ್ಷಗಳ ಐತಿಹಾಸಿಕ ಕಿಲ್ಲಾ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಶಿಲಾಮೂರ್ತಿ ಪ್ರತಿಷ್ಠಾಪಿಸಲಾಯಿತು.
ತಾವರಗೇರಾ ಸಂಸ್ಥಾನ ಆಳಿದ ಮಾಂಡಲೀಕ ರಾಜ ಅಂಕುಶ ಮಹಾರಾಜ ತನ್ನ ಆಳ್ವಿಕೆ ಯಲ್ಲಿ ಈ ದೇವಸ್ಥಾನ ನಿರ್ಮಿಸಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದ ಎಂದು ಹೇಳಲಾಗಿದೆ.
ಮೂರ್ತಿ ಭಿನ್ನ ಗೊಂಡಿದ್ದರಿಂದ ಸ್ಥಳೀಯ ಸಿದ್ಧಾರೂಢ ಮಠದ ಶ್ರೀ ಕುಮಾರಸ್ವಾಮಿ ಮತ್ತು ಕನಕಗಿರಿಯ ಬಸವರಾಜ ದಾಸರ್ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net