ಕಾಂಗ್ರೆಸ್​ ಸರ್ಕಾರದಿಂದ ಕೊಪ್ಪಳಕ್ಕೆ ಅನ್ಯಾಯ

C.V. CHANDRASHEKHAR
C.V. CHANDRASHEKHAR
Published on

ಪ್ರಮುಖ ಮುಖ್ಯಾಂಶಗಳು

  • ಸಿ.ವಿ.ಚಂದ್ರಶೇಖರ್​ ಆರೋಪ

ಕೊಪ್ಪಳ: ಕೊಪ್ಪಳ ತಾಲೂಕು ಬರ ಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದು ಅನ್ಯಾಯದ ಪರಮಾವಧಿ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್​ ಆರೋಪಿಸಿದ್ದಾರೆ.

ಹವಾನಿಯಂತ್ರಿತ ಕಚೇರಿಯಲ್ಲಿ ಕೂತು ಕಂಪ್ಯೂಟರ್​ ಅಂಕಿ ಅಂಶಗಳನ್ನು ಪರಿಗಣಿಸಿ ಬರ ತಾಲೂಕುಗಳ ಘೋಷಣೆ ಮಾಡಿದೆ. ಕೊಪ್ಪಳದ ಬಗ್ಗೆ ಕಾಂಗ್ರೆಸ್​ಗೆ ಇರುವ ತಾತ್ಸಾರಕ್ಕೆ ಇದು ಸಾ. ಮಳೆ ಇಲ್ಲದೇ ಜನರು ಪರದಾಡುತ್ತಿದ್ದಾರೆ. ನಮ್ಮ ಪಕ್ಷದಿಂದಲೂ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಅಂಶಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ, ಸರ್ಕಾರಕ್ಕೆ ಸಲ್ಲಿಸಿದ ಅಂಕಿ ಅಂಶಗಳಲ್ಲಿ ಅಪಾರ ವ್ಯತ್ಯಾಸವಿದೆ. ಜಿಲ್ಲೆಯ ಇಬ್ಬರು ಸಚಿವರು, ಶಾಸಕ ರಾವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಇದಕ್ಕೆ ಹೊಣೆಗಾರರು ಎಂದು ಟೀಕಿಸಿದ್ದಾರೆ.
ಕೂಡಲೇ ಕೊಪ್ಪಳ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲವೇ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಅನ್ಯಾಯ ಸರಿಪಡಿಸಿ. ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಿ. ಜಿಲ್ಲೆಯಲ್ಲಿ ರೈತರು ಬರದಿಂದ ತತ್ತರಿಸುತ್ತಿದ್ದರೆ. ಇವರು ಮಂತ್ರಿಪಟ್ಟಕ್ಕಾಗಿ ದೆಹಲಿಯಲ್ಲಿ ಹೋರಾಟ ನಡೆಸಿದ್ದರು. ರೈತರ ಜಮೀನಿಗೆ ಬರಲಿಲ್ಲ. ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲ. ನಿಷ್ಕ್ರಿಯತೆ, ಅದಕ್ಷತೆಯಿಂದ ಕೊಪ್ಪಳ ಕ್ಷೇತ್ರದ ಜನರು ತತ್ತರಿಸುವಂತಾಗಿದೆ ಎಂದು ಕುಟುಕಿದ್ದಾರೆ.
ಶಾಸಕ ರಾವೇಂದ್ರ ಹಿಟ್ನಾಳ ತಕ್ಷಣ ಅನ್ಯಾಯ ಸರಿಪಡಿಸಭೇಕು. ಇಲ್ಲದಿದ್ದರೆ ಕ್ಷೇತ್ರಾದ್ಯಂತ ಸುನಾಮಿಯಂತೆ ರೈತರು ಇವರ ವಿರುದ್ಧ ತಿರುಗಿ ಬೀಳುವರು. ನಾವೂ ಹೋರಾಟ ಹಮ್ಮಿಕೊಳ್ಳುತ್ತೇವೆ. ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು. ಹಿಂಗಾರು ಕೃಷಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಪೂರೈಸಿ.
ಸಿ.ವಿ.ಚಂದ್ರಶೇಖರ. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಕೊಪ್ಪಳ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net