ಸರ್ಕಾರಗಳಿಂದ ಕೃಷಿ ಕಾರ್ಮಿಕರಿಗೆ ಅನ್ಯಾಯ

ಕನಕಗಿರಿ ಸಿಐಟಿಯು ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಕಾರ್ಮಿಕ ಸಂಘಟನೆಯ ಎರಡನೇ ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ ಮಾತನಾಡಿದರು. ತಾಲೂಕು ಅಧ್ಯಕ್ಷ ರಮೇಶ ಹೀರೆಡಂಕನಲ್, ಹಿರಿಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಸಿಐಟಿಯು ತಾಲೂಕು ಸಮಿತಿ ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಇತರರಿದ್ದರು.
ಕನಕಗಿರಿ ಸಿಐಟಿಯು ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಕಾರ್ಮಿಕ ಸಂಘಟನೆಯ ಎರಡನೇ ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ ಮಾತನಾಡಿದರು. ತಾಲೂಕು ಅಧ್ಯಕ್ಷ ರಮೇಶ ಹೀರೆಡಂಕನಲ್, ಹಿರಿಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಸಿಐಟಿಯು ತಾಲೂಕು ಸಮಿತಿ ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಗುವಳಿ
  • ಚೀಟಿ
  • ಪಹಣಿ
ಕನಕಗಿರಿ: ಜನರ ತಲಾದಾಯ ಹೆಚ್ಚಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ ಆರೋಪಿಸಿದರು.
ಇಲ್ಲಿನ ತೊಂಡಿತೇರಪ್ಪ ದೇವಸ್ಥಾನದ ರಸ್ತೆಯಲ್ಲಿನ ಸಿಐಟಿಯು ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಕಾರ್ಮಿಕರ ಸಂಘದ ಎರಡನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಲ್ಲಿ ಕೇಂದ್ರದ ಮೋದಿ ಹಾಗೂ ಸಿದ್ರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೃಷಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಜನರಿಗೆ ಉದ್ಯೋಗ ನೀಡುತ್ತಿಲ್ಲ. ಪ್ರಸ್ತುತ ಜಾರಿಗೆ ತರಲು ಹೊರಟಿರುವ ವಿಕಸಿತ ಅಜವಿಕ ವಿಬಿರಾಮ್‌ಜಿ ಕಾಯ್ದೆ ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಅಮೆರಿಕಾ ಹಾಗೂ ಇಸ್ರೇಲ್ ಜತೆಗೂಡಿ ಇರಾನ್‌ನ ಮೇಲೆ ಸಾರಿರುವ ಯುದ್ಧದಿಂದಾಗಿ ಇಂಧನ ಹಾಗೂ ಗ್ಯಾಸ್ ಬೆಲೆಗಳು ಹೆಚ್ಚಳವಾಗಿದೆ. ಇರಾನ್‌ನಲ್ಲಿರುವ ಪೆಟ್ರೋಲಿಯಂ ಸಂಪತ್ತನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಾ ಇಂಥ ಕೃತ್ಯಕ್ಕೆ ಇಳಿದಿದ್ದು, ಪ್ರಪಂಚದ ಇತರೇ ದೇಶಗಳಿಗೆ ಸಂಕಷ್ಟವಾಗಿದೆ ಎಂದರು.
ಸಮ್ಮೇಳನದ ಬೇಡಿಕೆಗಳು: ನರೇಗಾ ಪುನರ್ ಸ್ಥಾಪನೆಯಾಗಿ 700ರೂ. ಕೂಲಿ ನಿಗದಿಯಾಗಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ 35 ಕೆ.ಜಿ.ಅಕ್ಕಿ, ಅಗತ್ಯ 14ವಸ್ತುಗಳ ರಿಯಾಯಿತಿ ದರದಲ್ಲಿ ವಿತರಣೆಯಾಗಬೇಕು. ಕನಕಗಿರಿ ತಾಲೂಕಿನಾದ್ಯಂತ ಕೃಷ್ಣ ಬಿ ಸ್ಕೀಂ ಅಡಿಯಲ್ಲಿ ಸಮಗ್ರ ನೀರಾವರಿಗೊಳಪಡಬೇಕು. ಡಾ. ಸ್ವಾಮಿನಾಥನ್ ವರದಿ ಜಾರಿ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ. ಸರ್ಕಾರಿ ಭೂಮಿಯಲ್ಲಿ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಪಹಣಿ ನೀಡುವುದು. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಿಸಿಕೊಡಲು ಸರ್ಕಾರ ಮುಂದಾಗಬೇಕು ಎಂದು ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಮೇಶ ಹೀರೆಡಂಕನಲ್ ವಹಿಸಿದ್ದರು. ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಸಿಐಟಿಯು ತಾಲೂಕು ಸಮಿತಿ ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಯಮನಪ್ಪ, ವಿರುಪಣ್ಣ ಬಂಡಿ, ಹನುಮ ಸಿಂಗ್, ರಾಘವೇಂದ್ರ, ಬಾಳಪ್ಪ ಹುಲಿಹೈದರ, ಹುಸೇನಪ್ಪ ಕೆ. ಇತರರಿದ್ದರು.
ನೂತನ ತಾಲೂಕು ಸಮಿತಿ ರಚನೆ: ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೂತನ ತಾಲೂಕು ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ ಹಿರೇ ಡಂಕನಕಲ್, ಕಾರ್ಯದರ್ಶಿಯಾಗಿ ಬಾಳಪ್ಪ ಹುಲಿಹೈದರ, ಉಪಾಧ್ಯಕ್ಷರಾಗಿ ಯಮನಪ್ಪ, ಸಣ್ಣ ದ್ಯಾವಮ್ಮ, ವಿರುಪಣ್ಣ, ದೇವೇಂದ್ರಪ್ಪ, ಖಜಾಂಚಿಯಾಗಿ ಕರಿಯಪ್ಪ ಭೋವಿ, ಸಹ ಕಾರ್ಯದರ್ಶಿಗಳಾಗಿ ಹನುಮಸಿಂಗ್, ಈಶಪ್ಪ ತಳವಾರ, ಬಸವರಾಜ ಚಿಕ್ಕಡಂಕನಕಲ್ ತಾಲೂಕು ಸಮಿತಿ ಸದಸ್ಯರಾಗಿ ಹನುಮಂತೆಮ್ಮ, ರಾಘವೇಂದ್ರ ತೆಗ್ಗಿನಮನಿ, ಮರಿಸ್ವಾಮಿ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net