

ಪ್ರಮುಖ ಮುಖ್ಯಾಂಶಗಳು
ಶಾಸಕ ಹೆಚ್.ಆರ್. ಗವಿಯಪ್ಪನವರ ಕಾರ್ಖಾನೆಯ ಧೂಳಿನಿಂದ ಹಿರೇಕಾಸನಕಂಡಿಯಲ್ಲಿ ಜನ-ಜಾನುವಾರುಗಳ ಬದುಕು ದುಸ್ತರವಾಗಿದೆ. 2014ರಿಂದ ಮಾಲಿನ್ಯದ ವಿರುದ್ಧ ಹೋರಾಡುತ್ತಿದ್ದರೂ, ಗೂಂಡಾಗಳ ಮೂಲಕ ನಮಗೆ ಬೆದರಿಕೆ ಹಾಕಲಾಗುತ್ತಿದೆ. ಕೃಷಿ ನಾಶವಾಗಿದ್ದು, ಈಗಾಗಲೇ ಪರಿಸರ ಇಲಾಖೆ ಕಾರ್ಖೆನೆಗೆ ಕ್ಲೋಸ್ ಆರ್ಡರ್ ನೀಡಿದೆ. ಕೇವಲ ಹಣದ ಆಸೆಗಾಗಿ ಕೆಲವು ಮಹಿಳೆಯರು ಕಾರ್ಖಾನೆ ಪರ ಸುಳ್ಳು ಹೇಳುತ್ತಿದ್ದಾರೆ.
2008ರಿಂದ ಕಾರ್ಖಾನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ನನ್ನ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾನೆ, ನನಗೆ ಕಣ್ಣು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಕಾರ್ಖಾನೆ ಬೇಡ, ಬದುಕಲು ಆಗದಿದ್ದರೆ ವಿಷ ಕೊಡಿ.
ನೀರು ಕುಡಿದರೂ ಕರಿಬೂದಿ ಬರುತ್ತಿದೆ. ದುಡಿದು ತಿನ್ನಲು ಆಗುತ್ತಿಲ್ಲ. ಕಾರ್ಖಾನೆ ಬಂದ್ ಮಾಡಬೇಕೆಂದು ಒತ್ತಾಯಿಸಿದರು..
ಕಾರ್ಖಾನೆ ಮಾಲಿನ್ಯದಿಂದ ಮಗುವಿಗೆ ಕಿಡ್ನಿ ಸಮಸ್ಯೆ ಉಂಟಾಗಿ ಮೃತಪಟ್ಟಿದೆ. ಚಿಕಿತ್ಸೆಗೆ ಲಕ್ಷಾಂತರ ರೂ. ಸಾಲವಾಗಿದೆ. ಕೃಷಿಯೂ ನಾಶವಾಗಿದೆ ಎಂದು ಅಳಲು ತೋಡಿಕೊಂಡರು.
ಕಾರ್ಖಾನೆಗಳಿಂದ ಹಿರೇಬಗನಾಳ, ಹಿರೇಕಾಸನಕಂಡಿ ಸೇರಿದಂತೆ ಸುತ್ತಮುತ್ತಲಿನ 20 ಗ್ರಾಮಗಳಲ್ಲಿ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿವೆ. ತಜ್ಞ ವಿಜ್ಞಾನಿಗಳಿಂದ ಇಲ್ಲಿನ ಪರಿಸರ ಹಾಗೂ ಜನರ ಆರೋಗ್ಯದ ಕುರಿತು ಸಮಗ್ರ ಸಮೀಕ್ಷೆ ನಡೆಸಬೇಕು. ಕಾರ್ಖಾನೆಗಳ ಕಲುಷಿತ ನೀರು ತುಂಗಭದ್ರಾ ನದಿ ಸೇರುತ್ತಿದ್ದು, ಬಸಾಪುರ ಕೆರೆ ಸಂಪೂರ್ಣ ಹಾನಿಗೊಳಗಾಗಿದೆ. ಸರ್ಕಾರ ತಕ್ಷಣವೇ ಹೊಸ ಕಾರ್ಖಾನೆಗಳ ವಿಸ್ತರಣೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ದಿನಾಂಕ ನಿಗದಿಪಡಿಸಬೇಕು.