

ಪ್ರಮುಖ ಮುಖ್ಯಾಂಶಗಳು
ಪಟ್ಟಣದ ವಾರ್ಡ್‌ಗಳ ಅಭಿವೃದ್ಧಿಗೆ ಬಳಸಲು ಅನುದಾನ ಕೊರತೆಯಿದೆ ಎಂದು ಹೇಳುವ ಪಪಂ ಅಧಿಕಾರಿಗಳು ಕ್ಯಾಂಟೀನ್‌ಗೆ ಅನುದಾನ ಬಳಸಿದ್ದು, ತಿಂಗಳೊಳಗಾಗಿ ಫೇವರ್ಸ್‌ಗಳು ಕುಸಿದಿರುವುದು ಅನುದಾನ ಪೋಲಾಗಿದೆ. ಇನ್ನು ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಮಾಯವಾಗಿದೆ. ಬಡವರಿಗೆ ಕಡಿಮೆ ದರಕ್ಕೆ ದೊರೆಯುವ ಊಟ-ಉಪಹಾರ ರುಚಿಯಾಗಿಲ್ಲ.
ಗುತ್ತಿಗೆದಾರರು ಪರಿವೀಕ್ಷಣಾ ಅವಧಿಯಲ್ಲೇ ಇದ್ದಾರೆ. ಮೆನು ಪ್ರಕಾರ ಉತ್ತಮ ಉಪಹಾರ-ಊಟ ಕೊಡುವುದಕ್ಕೆ ಸೂಚಿಸಲಾಗುವುದು. ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಕಾಪಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಶೌಚಗೃಹಗಳ ಬಾಗಿಲುಗಳನ್ನು ಎರಡ್ಮೂರು ಬಾರಿ ದುರಸ್ತಿ ಮಾಡಿಸಲಾಗಿದೆ. ಆದರೂ, ಕೆಲ ಕಿಡಿಗೇಡಿಗಳು ಹಾಳು ಮಾಡುತ್ತಿರುವ ಬಗ್ಗೆ ಮಾಹಿತಿಯಿದೆ. ಮತ್ತೊಮ್ಮೆ ಸರಿಪಡಿಸಲಾಗುವುದು. ಫೇವರ್ಸ್ ಸರಿಪಡಿಸಲು ತಿಳಿಸಲಾಗುವುದು.