ಭಾರತಕ್ಕೆ ವಿಶ್ವಮಟ್ಟದಲ್ಲಿ ವಿಶಿಷ್ಟ ಸ್ಥಾನ

ನರೇಂದ್ರ ಮೋದಿ ಹೆಚ್ಚು ದಿನಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಿಮಿತ್ತ ಯಲಬುರ್ಗಾದಲ್ಲಿ ಸಂಭ್ರಮಿಸಲಾಯಿತು. ಪಪಂ ಮಾಜಿ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ, ಮಾಜಿ ಸದಸ್ಯ ಕಳಕಪ್ಪ ತಳವಾರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಮೀ ಜೋಶಿ, ಪ್ರಮುಖರಾದ ರೇಖಾ ಅಯ್ಯನಗೌಡ, ಲಲಿತಾ ಭಾಸ್ಕರ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಜಯದುರ್ಗಾ ಮಾತೆ ದೇವಸ್ಥಾನದಲ್ಲಿ ವಿಶೇಷ ಪೂಜೆ
  • ಬಿಜೆಪಿ ತಾಲೂಕು ವಕ್ತಾರ ವೀರಣ್ಣ ಹುಬ್ಬಳ್ಳಿ ಹೇಳಿಕೆ
ಯಲಬುರ್ಗಾ: ನರೇಂದ್ರ ಮೋದಿ ಹೆಚ್ಚು ದಿನಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಿಮಿತ್ತ ಬಿಜೆಪಿ ಕಾರ್ಯಕರ್ತರು ನಗರದ ಆರಾಧ್ಯ ದೇವತೆ ಶ್ರೀ ವಿಜಯದುರ್ಗಾ ಮಾತೆ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ತಾಲೂಕು ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಅಭಿವೃದ್ಧಿ, ಮೂಲಸೌಕರ್ಯ, ಡಿಜಿಟಲ್ ಕ್ರಾಂತಿ ಹಾಗೂ ಜನಪರ ಯೋಜನೆಗಳ ಮೂಲಕ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಜನರ ಹಿತಾಸಕ್ತಿ ಪರಿಗಣಿಸಿ ಕಾರ್ಯನಿರ್ವಹಿಸುತ್ತಿರುವ ಮೋದಿ ಅವರ ಸೇವೆ ದೇಶಕ್ಕೆ ಇನ್ನಷ್ಟು ಕಾಲ ದೊರೆಯಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ, ಮಾಜಿ ಸದಸ್ಯ ಕಳಕಪ್ಪ ತಳವಾರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಮೀ ಜೋಶಿ, ಪ್ರಮುಖರಾದ ರೇಖಾ ಅಯ್ಯನಗೌಡ, ಲಲಿತಾ ಭಾಸ್ಕರ್, ಗೌತಮ ಜೋಶಿ, ಶರಣಪ್ಪ ತೋಟರ್, ನಾಗಪ್ಪ ಹಳೆಮನೆ, ಬಸಲಿಂಗಪ್ಪ ಹಳೆಮನೆ, ನಾಗರಾಜ ಅಯ್ಯನಗೌಡ, ವಸಂತ ಬಾವಿಮನಿ, ಸಿದ್ದರಾಮೇಶ ಬೆಲೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net