ಸಾಗುವಳಿ ಮಾಡುವ ರೈತರಿಗೆ ರಕ್ಷಣೆ ನೀಡಿ

ಮ್ಯಾದರಡೊಕ್ಕಿ ತಾಂಡಾದ ಸ.ನಂ.74ರ ಭೂ ಸಾಗುವಳಿದಾರರು ಅರಣ್ಯ ಅಧಿಕಾರಿಗಳಿಂದ ಸೂಕ್ತ ರಕ್ಷಣೆ ಕೋರಿ ಸಾಗುವಳಿ ಜಮೀನಿನಲ್ಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಕರ್ನಾಟಕ ರೈತ ಸಂಘ ತಾಲೂಕು ಸಮಿತಿಯ ಪ್ರಮುಖ ಡಿ.ಎಚ್.ಪೂಜಾರ್, ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲೇಶ ಗೌಡ ಕನ್ನೇರಮಾಡು, ರಾಜ್ಯ ಸಂಚಾಲಕ ಬಿ.ಎನ್.ಯರದಿಹಾಳ ಇತರರಿದ್ದರು.

Published on
ಕುಷ್ಟಗಿ: ಅರಣ್ಯ ಇಲಾಖೆ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಮ್ಯಾದರಡೊಕ್ಕಿ ತಾಂಡಾದ ಸ.ನಂ.74ರ ಭೂ ಸಾಗುವಳಿದಾರರು ಸಾಗುವಳಿ ಜಮೀನಿನಲ್ಲೇ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಪ್ರಮುಖ ಡಿ.ಎಚ್.ಪೂಜಾರ್ ಮಾತನಾಡಿ, ಮ್ಯಾದರಡೊಕ್ಕಿ ತಾಂಡಾ ರೈತರು 60 ವರ್ಷದಿಂದ ಸಂ.ನಂ.74ರ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರದ ಆದೇಶದಂತೆ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಸಾಗುವಳಿ ಮಾಡುವವರು ಮತ್ತು 1980ಕ್ಕಿಂತ ಹಿಂದಿನಿಂದ ಸಾಗುವಳಿ ಮಾಡುವ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದೆಂಬ ನಿಯಮವಿದೆ. ಆದರೂ ಅರಣ್ಯ ಅಧಿಕಾರಿಗಳು ಬಡ ಹಾಗೂ ದಲಿತ ಸಾಗುವಳಿದಾರರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದು, ಇವರಿಂದ ಸೂಕ್ತ ರಕ್ಷಣೆ ನೀಡಬೇಕು. ಸಾಗುವಳಿ ಭೂಮಿಯಲ್ಲಿ ಗಿಡ ನೆಡುವ ಕಾರ್ಯ ನಿಲ್ಲಿಸಲು ಶಾಸಕ ದೊಡ್ಡನಗೌಡ ಅವರು, ಅರಣ್ಯಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲೇಶ ಗೌಡ ಕನ್ನೇರಮಾಡು, ರಾಜ್ಯ ಸಂಚಾಲಕ ಬಿ.ಎನ್.ಯರದಿಹಾಳ, ತಾಲೂಕು ಕಾರ್ಯದರ್ಶಿ ನಿರುಪಾದಿ ಬುನ್ನಟ್ಟಿ, ತಾಲೂಕಾಧ್ಯಕ್ಷ ಶರಣಪ್ಪ ನಾಯಕ್, ಸದಸ್ಯರಾದ ಶ್ಯಾಮೀದ್ ಸಾಬ್ ತಾವರಗೇರಾ, ದ್ಯಾಮಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net