ಕುಕನೂರು ತಾಪಂ ಕಚೇರಿ ಮುಂಭಾಗ ಕಲ್ಯಾಣ ಕರ್ನಾಟಕ ಯಲಬುರ್ಗಾ-ಕುಕನೂರು ತಾಲೂಕು ಸಿವಿಲ್ ಗುತ್ತಿಗೆದಾರರ ಎಸ್ಸಿ-ಎಸ್ಟಿ ಸಂಘ ಅನಿರ್ದಿಷ್ಟಾವಧಿ ಧರಣಿ ನಡೆಸಿತು. ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಪ್ರಮುಖರಾದ ಲಕ್ಷ್ಮಣ ಕಾಳಿ, ಸುರೇಶ ಬಳೂಟಗಿ, ನೀಲಪ್ಪ ದೊಡ್ಡಮನಿ, ಸಿದ್ದು ಮಣ್ಣಿನವರ್ ಇತರರಿದ್ದರು.
ಕುಕನೂರು:ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ತುಂಡುಗುತ್ತಿಗೆ ನೀಡಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಯಲಬುರ್ಗಾ-ಕುಕನೂರು ತಾಲೂಕು ಸಿವಿಲ್ ಗುತ್ತಿಗೆದಾರರ ಎಸ್ಸಿ-ಎಸ್ಟಿ ಸಂಘ ಪಟ್ಟಣದ ತಾಪಂ ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿತು.
ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಎಸ್ಸಿ, ಎಸ್ಟಿ ಸಣ್ಣ ಪ್ರಮಾಣದ ಗುತ್ತಿಗೆದಾರರಿಗೆ ತುಂಡು ಗುತ್ತಿಗೆಯನ್ನು ತಾಲೂಕು ಅಧಿಕಾರಿಗಳು ನೀಡಬೇಕು. ಆದರೆ, ಕೆಲವು ಪ್ರಭಾವಿಗಳ ಮಾತು ಕೇಳಿ ನಮಗೆ ತುಂಡು ಗುತ್ತಿಗೆಯನ್ನು ನೀಡುತ್ತಿಲ್ಲ. ತಾಪಂ ಇಒ ಅವರಿಗೆ ಅನೇಕ ಸಲ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರತಿ ಹೆಡ್‌ನಲ್ಲಿ ತೆಗೆದುಕೊಳ್ಳುವ ಶೇ.25 ಕಾಮಗಾರಿಗಳನ್ನು ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಅವಕಾಶ ವಂಚಿತ ಗುತ್ತಿಗೆದಾರರಿಗೆ ಕೆಲಸ ನೀಡದಿದ್ದಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.