ಕೊಪ್ಪಳಕ್ಕೆ ದೈನಂದಿನ ರೈಲುಗಳ ಸಂಖ್ಯೆ ಹೆಚ್ಚಿಸಿ

ಸಿ.ವಿ.ಚಂದ್ರಶೇಖರ
ಸಿ.ವಿ.ಚಂದ್ರಶೇಖರ
Published on

ಪ್ರಮುಖ ಮುಖ್ಯಾಂಶಗಳು

  • ಸಿ.ವಿ.ಚಂದ್ರಶೇಖರ ಒತ್ತಾಯ
ಕೊಪ್ಪಳ: ಅಮೃತ್​ ಭಾರತ್​ ಯೋಜನೆಯಡಿ ನಗರದ ರೈಲು ನಿಲ್ದಾಣಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಿದ ಮಾದರಿಯಲ್ಲಿ ದೈನಂದಿನ ರೈಲುಗಳ ಸಂಖ್ಯೆ ಹೆಚ್ಚಿಸುವಂತೆ ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊಪ್ಪಳದಿಂದ ಬಳ್ಳಾರಿ, ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಬೆಳಗ್ಗೆ 8.30ರಿಂದ ಸಂಜೆ 4 ಗಂಟೆವರೆಗೆ ಹುಬ್ಬಳ್ಳಿಗೆ ರೈಲುಗಳಿಲ್ಲ. ಹುಬ್ಬಳ್ಳಿಯಿಂದ ಕೊಪ್ಪಳದ ಕಡೆಗೆ ಚಲಿಸುವ ರೈಲುಗಳ ಸಂಖ್ಯೆಯೂ ಕಡಿಮೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಎರಡು ಹೊಸ ರೈಲುಗಳನ್ನು ಬಳ್ಳಾರಿ&ಧಾರವಾಡವರೆಗೆ ಓಡಿಸಬೇಕು. ಕೊಪ್ಪಳ&ಬೆಂಗಳೂರಿಗೆ ಎರಡು ರೈಲುಗಳಿದ್ದು, ಪ್ರಯಾಣಿಕರ ಅಗತ್ಯತೆ ಪೂರೈಸುತ್ತಿಲ್ಲ.
ಧಾರವಾಡದಿಂದ ಕೊಪ್ಪಳ ಮಾರ್ಗವಾಗಿ ಮೈಸೂರುವರೆಗೆ ಪ್ಯಾಸೆಂಜರ್​ ರೈಲು ಓಡಿಸಬೇಕು. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕೊಪ್ಪಳದ ಮೂಲಕ ನಮೋ ಭಾರತ್​ ರೈಲು ಪರಿಚಯಿಸುವುದಾಗಿ ಆಶ್ವಾಸನೆ ನೀಡಿದ್ದರು. ಅದನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ನೈರುತ್ಯ ರೈಲ್ವೆ ಮ್ಯಾನೇಜರ್​ ಪಿ.ಅನಂತ್​ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net