ಭಾರತ್​ ಜೋಡೋ ಯುವ ಸಂಘಗಳಿಗೆ ನೋಂದಣಿ ಹೆಚ್ಚಿಸಿ

ಕೊಪ್ಪಳದಲ್ಲಿ ನಡೆದ ಭಾರತ್​ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಜಿಪಂ ಸಿಇಒ ವರ್ಣಿತ್​ ನೇಗಿ, ಎಡಿಸಿ ಸಿದ್ರಾಮೇಶ್ವರ ಇದ್ದರು.
ಕೊಪ್ಪಳದಲ್ಲಿ ನಡೆದ ಭಾರತ್​ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಜಿಪಂ ಸಿಇಒ ವರ್ಣಿತ್​ ನೇಗಿ, ಎಡಿಸಿ ಸಿದ್ರಾಮೇಶ್ವರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಸೂಚನೆ

ಕೊಪ್ಪಳ : ಜಿಲ್ಲೆಯ 16 ರಿಂದ 35 ವರ್ಷದ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್​ ಜೋಡೋ ಯುವ ಸಂಘಗಳಿಗೆ ನೋಂದಾಯಿಸಿ, ಜಿಲ್ಲೆಯಲ್ಲಿ ಸಂಘಗಳ ಸ್ಥಾಪನೆಯನ್ನು ಯಶಸ್ವಿಗೊಳಿಸುವಂತೆ ಡಿಸಿ ಡಾ. ಸುರೇಶ್​ ಬಿ. ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ್​ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತ ಸಭೆಯಲ್ಲಿ ಮಾತನಾಡಿದರು.
ಯುವಕರಲ್ಲಿ ನಾಯಕತ್ವ, ಕ್ರೀಡೆ, ವೈಜ್ಞಾನಿಕ ಮನೋಭಾವ, ಸಾಮರಸ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್​ ಮಟ್ಟದಲ್ಲಿ ಸಂಘಗಳನ್ನು ರಚಿಸಿ ಯುವಕರನ್ನು ಸಬಲೀಕರಣಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 214 ಭಾರತ್​ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ನೋಂದಾಯಿತ ಪ್ರತಿಯೊಬ್ಬ ಸದಸ್ಯರಿಗೆ ಯೂನಿಕ್​ ಐಡಿ ಕಾರ್ಡ್​ ನೀಡಲಾಗುವುದು. ಪ್ರತಿ ಸಂಘಕ್ಕೆ ಸರ್ಕಾರದಿಂದ ಒಬ್ಬ ಮೆಂಟರ್​ ನೇಮಕವಾಗಲಿದ್ದು, ವಿವಿಧ ಹಂತಗಳಲ್ಲಿ 10 ಲಕ್ಷ ರೂ. ವರೆಗೆ ಅನುದಾನ ನೀಡುವ ಅವಕಾಶವಿದೆ. ಆಗಸ್ಟ್​ 6ರಂದು ಬಿಜೆವೈಎಸ್​ ಮೊಬೈಲ್​ ಆಪ್​ ಮತ್ತು ವೆಬ್​ಸೈಟ್​ ಉದ್ಘಾಟನೆಯಾಗಲಿದ್ದು, ಎರಡನೇ ವಾರದಲ್ಲಿ ಯೋಜನೆಗೆ ರಾಜ್ಯಮಟ್ಟದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ ಎಂದರು.
ಜಿಪಂ ಸಿಇಒ ವರ್ಣಿತ್​ ನೇಗಿ, ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್​ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ವಿಶ್ವನಾಥ್​, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್​, ತಹಶೀಲ್ದಾರ ಬಸವರಾಜ ತೆನ್ನಳ್ಳಿ, ಡಿಡಿಪಿಐ ಸೋಮಶೇಖರ ಗೌಡ, ಡಿಡಿಪಿಯು ಜಗದೀಶ್​ ಜಿ.ಎಚ್​., ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮರೇಶ್​ ಹಾವಿನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net