‘ಶಿಕ್ಷಣ’ ವ್ಯಕ್ತಿತ್ವ ರೂಪಿಸುವ ರಹದಾರಿ

ಗಂಗಾವತಿ ಐಎಂಎ ಹಾಲ್‌ನಲ್ಲಿ ಜ್ಞಾನಸಿರಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಉದ್ಘಾಟನೆಯನ್ನು ಡಿಐಜಿ ರವಿ ಡಿ. ಚನ್ನಣ್ಣನವರ್ ನೆರವೇರಿಸಿದರು. ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಇತರರಿದ್ದರು.
ಗಂಗಾವತಿ ಐಎಂಎ ಹಾಲ್‌ನಲ್ಲಿ ಜ್ಞಾನಸಿರಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಉದ್ಘಾಟನೆಯನ್ನು ಡಿಐಜಿ ರವಿ ಡಿ. ಚನ್ನಣ್ಣನವರ್ ನೆರವೇರಿಸಿದರು. ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಐಜಿ ರವಿ ಡಿ. ಚನ್ನಣ್ಣನವರ್ ಅಭಿಮತ
ಗಂಗಾವತಿ: ಶಿಕ್ಷಣ ಕೇವಲ ಉದ್ಯೋಗ ಸೃಷ್ಟಿಸುವ ಸಾಧನವಲ್ಲ. ಉತ್ತಮ ವ್ಯಕ್ತಿತ್ವ ರೂಪಿಸುವ ರಹದಾರಿ ಎಂದು ಡಿಐಜಿ ರವಿ ಡಿ. ಚನ್ನಣ್ಣನವರ್ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜ್ಞಾನಸಿರಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ಸಮಯದ ಮಹತ್ವ ಅರಿತು ಆತ್ಮವಿಶ್ವಾಸದಿಂದ ಮುನ್ನಡೆಯಬೇಕಿದ್ದು, ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮ ರೂಢಿಸಿಕೊಳ್ಳಬೇಕು. ಜ್ಞಾನ ವೃದ್ಧಿಗೆ ಮೊಬೈಲ್, ತಂತ್ರಜ್ಞಾನ ಬಳಸಿಕೊಳ್ಳಬೇಕಿದ್ದು, ದುರ್ಬಳಕೆಗೆ ಅವಕಾಶ ನೀಡಬಾರದು. ದೇಶದ ನಿರೀಕ್ಷಿತ ಅಭಿವೃದ್ಧಿಗೆ ವಿದ್ಯಾವಂತ, ಸಂಸ್ಕಾರವಂತ ಮತ್ತು ಜವಾಬ್ದಾರಿಯುತ ಯುವಕರ ಅಗತ್ಯವಿದ್ದು, ಶಿಕ್ಷಣ ಸಾಧನೆ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಶಿಕ್ಷಣದ ಮೂಲಕ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದ್ದು, ಪದವಿ ಕಾಲೇಜು ಆರಂಭಿಸಿದ್ದು ಉತ್ತಮ ಬೆಳವಣಿಗೆ. ಅಧ್ಯಯನ, ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಎಸ್. ಪಾಟೀಲ್ ಮಾತನಾಡಿದರು.
ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಶಿವರಾಜ ತಂಗಡಗಿ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಎಡಿಸಿ ಸಿದ್ರಾಮೇಶ್ವರ, ಪ್ರಮುಖರಾದ ಜೋಗದ ನಾರಾಯಣಪ್ಪ ನಾಯಕ, ಡಾ.ಶಿವಕುಮಾರ್ ಮಾಲಿಪಾಟೀಲ್, ರಾಮಮೂರ್ತಿ, ಕೆ.ನಿಂಗಜ್ಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net