ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಿ

ಯಲಬುರ್ಗಾ ತಾಲೂಕಿನ ಕುದುರಿಕೋಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ಛತ್ರಪ್ಪ ಮುಧೋಳ, ಶಶಿಧರ ಹೊಸಮನಿ, ಕಳಕಪ್ಪ ತಳವಾರ, ಅಂದಪ್ಪ ಛಲವಾದಿ, ಶಂಕ್ರಪ್ಪ ಜಕ್ಕಲಿ, ಪ್ರಕಾಶ ಉಂಗ್ರಾಣಿ, ಮಲ್ಲಪ್ಪ ಸುರಕೊಡ, ಕಲ್ಲಯ್ಯ ಸಸಿಮಠ, ಅಂದಪ್ಪ ರೇವಡಿ ಇತರರಿದ್ದರು.
ಯಲಬುರ್ಗಾ ತಾಲೂಕಿನ ಕುದುರಿಕೋಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ಛತ್ರಪ್ಪ ಮುಧೋಳ, ಶಶಿಧರ ಹೊಸಮನಿ, ಕಳಕಪ್ಪ ತಳವಾರ, ಅಂದಪ್ಪ ಛಲವಾದಿ, ಶಂಕ್ರಪ್ಪ ಜಕ್ಕಲಿ, ಪ್ರಕಾಶ ಉಂಗ್ರಾಣಿ, ಮಲ್ಲಪ್ಪ ಸುರಕೊಡ, ಕಲ್ಲಯ್ಯ ಸಸಿಮಠ, ಅಂದಪ್ಪ ರೇವಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿಕೆ
  • ನೂತನ ಗ್ರಾಮ ಘಟಕ ಉದ್ಘಾಟನೆ
ಯಲಬುರ್ಗಾ: ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಕಾರ್ಮಿಕ ಇಲಾಖೆಯಿಂದ 15ಕ್ಕಿಂತ ಹೆಚ್ಚು ಸೇವೆಗಳು ಸಕಾಲದಲ್ಲಿ ಸಿಗುವ ಯೋಜನೆಯೇ ಸೇವಾ ಸಿಂಧು ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುದುರಿಕೋಟಗಿ ಗ್ರಾಮದಲ್ಲಿ ಕರ್ನಾಟಕ ಸಮತಾವಾದ ಭೀಮಸೇನ, ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರೈನಿಂಗ್ ಕಮ್ ಟೂಲ್ ಕಿಟ್, ವಸತಿ, ಹೆರಿಗೆ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರಿ ಯೋಜನೆಗಳ ಕುರಿತು ಕಾರ್ಮಿಕ ಇಲಾಖೆ ಅರಿವು ಮೂಡಿಸಬೇಕು. ಇಲಾಖೆಯಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಅನಾರೋಗ್ಯಕ್ಕೆ ನೆರವು ನೀಡುವ ಯೋಜನೆಗಳಿವೆ ಎಂದು ತಿಳಿಸಿದರು.
ಕಾರ್ಮಿಕ ಸಂಘದ ಗೌರವಾಧ್ಯಕ್ಷ ಶರಣಯ್ಯ ಬಳಗೇರಿಮಠ ಮಾತನಾಡಿ, ಕಟ್ಟಡ ಮತ್ತು ಇತರೆ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಮಂಡಳಿ ಸ್ಥಾಪಿಸಿದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ನೆರವು, ಮದುವೆ ಮತ್ತು ಅಪಘಾತ ಪರಿಹಾರಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸುವ ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅರ್ಹರು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪ್ರಮುಖರಾದ ಛತ್ರಪ್ಪ ಮುಧೋಳ, ಶಶಿಧರ ಹೊಸಮನಿ, ಕಳಕಪ್ಪ ತಳವಾರ, ಅಂದಪ್ಪ ಛಲವಾದಿ, ಶಂಕ್ರಪ್ಪ ಜಕ್ಕಲಿ, ಪ್ರಕಾಶ ಉಂಗ್ರಾಣಿ, ಮಲ್ಲಪ್ಪ ಸುರಕೊಡ, ಕಲ್ಲಯ್ಯ ಸಸಿಮಠ, ಅಂದಪ್ಪ ರೇವಡಿ, ಬಸವರಾಜ ರೇವಡಿ, ದುರಗಪ್ಪ ಬೇವಿನ ಗಿಡದ, ದುರಗಪ್ಪ ಮಾದರ, ಶರಣಪ್ಪ ಚನ್ನಪ್ಪನಹಳ್ಳಿ, ವೀರಯ್ಯ ಸಸಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net