ಕೊಪ್ಪಳ ರೈಲು ನಿಲ್ದಾಣ ಲೋಕಾರ್ಪಣೆ

ಕೊಪ್ಪಳ ನಗರದ ನೂತನ ರೈಲು ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮವನ್ನು ಶುಕ್ರವಾರ ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನ್​ಸಾಬ್​ ದೋಟಿಹಾಳ ಉದ್ಘಾಟಿಸಿದರು. ವರ್ತಕರ ಸಂದ ಜಿಲ್ಲಾಧ್ಯಕ್ಷ ಸಿದ್ದಣ್ಣ ನಾಲ್ವಾಡ,  ಎಡಿಆರ್​ಎಂ ಪ್ರೇಮ್​ಚಂದ್​ ಇದ್ದರು.
ಕೊಪ್ಪಳ ನಗರದ ನೂತನ ರೈಲು ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮವನ್ನು ಶುಕ್ರವಾರ ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನ್​ಸಾಬ್​ ದೋಟಿಹಾಳ ಉದ್ಘಾಟಿಸಿದರು. ವರ್ತಕರ ಸಂದ ಜಿಲ್ಲಾಧ್ಯಕ್ಷ ಸಿದ್ದಣ್ಣ ನಾಲ್ವಾಡ, ಎಡಿಆರ್​ಎಂ ಪ್ರೇಮ್​ಚಂದ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವರ್ಚುವಲ್​ ವೇದಿಕೆ ಮೂಲಕ ಉದ್ಘಾಟಿಸಿದ ಪಿಎಂ
  • ವಿವಿಧ ಗಣ್ಯರು ಭಾಗಿ
ಕೊಪ್ಪಳ: ಅಮೃತ್​ ಭಾರತ್​ ಸ್ಟೇಷನ್​ ಯೋಜನೆಯಡಿ ಮರು ನಿರ್ಮಾಣಗೊಂಡ ನಗರದ ರೈಲ್ವೆ ನಿಲ್ದಾಣವನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್​ ವೇದಿಕೆ ಮೂಲಕ ಲೋಕಾರ್ಪಣೆಗೊಳಿಸಿದರು.
ದೇಶಾದ್ಯಂತ ಎರಡನೇ ಹಂತದಲ್ಲಿ 75 ನಿಲ್ದಾಣ ಲೋಕಾರ್ಪಣೆಗೊಂಡಿದ್ದು, ರಾಜ್ಯದ 4 ಸ್ಟೇಷನ್​ಗಳೂ ಇದರಡಿ ಸೇರ್ಪಡೆಗೊಳಿಸಲಾಯಿತು. ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನ್​ಸಾಬ್​ ದೋಟಿಹಾಳ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿ ಸಂಪರ್ಕ ಸೇವೆಯಲ್ಲಿ ಪ್ರಮುಖವಾದ ರೈಲ್ವೆ ಜಾಲ ವಿಸ್ತರಣೆಗೆ ಮುಂದಾಗಿರುವುದು ಶ್ಲಾನೀಯ. ಮೊದಲಿದ್ದ ನಿಲ್ದಾಣಕ್ಕೂ ಈಗಿರುವ ನಿಲ್ದಾಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ನನಗೆ ಆಪ್ತರು. ನಮ್ಮ ಭಾಗದ ರೈಲ್ವೆ ಅಭಿವೃದ್ಧಿಗಾಗಿ ಅವರೊಂದಿಗೆ ಹಲವು ಬಾರಿ ಮಾತನಾಡಿರುವೆ. ಸಿಂಧನೂರು, ಕುಷ್ಟಗಿವರೆಗೆ ರೈಲು ಸೇವೆ ಆರಂಭವಾಗಿದೆ. ಹೆಚ್ಚುವರಿ ರೈಲು ಓಡಾಟ ಆರಂಭ, ನಿಲ್ದಾಣಗಳ ಅಭಿವೃದ್ಧಿ ಸೇರಿ ಇನ್ನಿತರ ಕೆಲಸಗಳಾಗಬೇಕಿದೆ ಎಂದರು.
ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಎಂದು ತಿಳಿಸಿದ್ದ ಕಾರಣ ಜನರು ಆಗಮಿಸಿ ಗಂಟೆಗಟ್ಟಲೇ ಕಾದರು. ಪ್ರಧಾನಿ ನರೇಂದ್ರ ಮೋದಿ ಸಂಜೆ 4.40ಕ್ಕೆ ಜೈಪುರದಲ್ಲಿ ಹೈಡ್ರೋಜನ್​ ರೈಲಿಗೆ ಚಾಲನೆ ನೀಡಿ, ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಪದ್ಮಶ್ರೀ ಪುರಸತ ತೊಗಲುಗೊಂಬೆ ಕಲಾವಿದೆ ಮೋರನಳ್ಳಿ ಭೀಮವ್ವ ಶಿಳ್ಳಿಕ್ಯಾತರ್​, ಸ್ವಾತಂತ್ರ್ಯ ಹೋರಾಟಗಾರ ವಿ.ಎಸ್​.ಆಚಾರ್​ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಹಮ್ಮಿಕೊಂಡಿದ್ದ ಕ್ವಿಜ್​ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ವರ್ತಕರ ಸಂದ ಜಿಲ್ಲಾಧ್ಯಕ್ಷ ಸಿದ್ದಣ್ಣ ನಾಲ್ವಾಡ, ಎಡಿಆರ್​ಎಂ ಪ್ರೇಮ್​ಚಂದ್​, ರೈಲ್ವೆ ಅಧಿಕಾರಿಗಳು, ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.

ಕಳಪೆ ಕಾಮಗಾರಿ ಆರೋಪ

ನೂತನ ರೈಲು ನಿಲ್ದಾಣದಲ್ಲಿ ಶೆಲ್ಟರ್​ ಅಳವಡಿಸಿದ್ದು, ಮಳೆ ನೀರು ಹರಿವ ಪೈಪ್​ ಕಾಮಗಾರಿ ಸರಿಯಾಗಿ ಆಗಿಲ್ಲ. ಗುರುವಾರ ರಾತ್ರಿ ಮಳೆ ಸುರಿದಿದ್ದು ವೇದಿಕೆ ಬಳಿಯೇ ನೀರು ಸೋರಿದೆ. ಪೈಪ್​ ಮೂಲಕವೂ ಜಲ ಚಿಮ್ಮಿದೆ. ಉದ್ಘಾಟನೆಗೂ ಮುನ್ನವೇ ಕಾಮಗಾರಿ ಕಳಪೆ ಆಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಕಳಪೆ ಕಾಮಗಾರಿ ನಡೆದಿದ್ದು ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net