ಡಿಸಿ ಡಾ. ಸುರೇಶ್ ಬಿ. ಇಟ್ನಾಳ ಮಾತನಾಡಿ, ಕೋರ್ಟ್ ಆರಂಭಕ್ಕೆ ಶಾಸಕ ಶಿವರಾಜ ತಂಗಡಗಿ ಅನುದಾನ ನೀಡಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಸಿ. ಅವರ ಸತತ ಪ್ರಯತ್ನದಿಂದಾಗಿ ಈ ನ್ಯಾಯಾಲಯ ಆರಂಭ ಸಾಧ್ಯವಾಗಿದೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಸೇರಿ ಸಂಚಾರಿ ನ್ಯಾಯಾಲಯ ಆರಂಭಿಸುವ ಮೂಲಕ ತೃಪ್ತಿ ತರುವ ಕೆಲಸ ಮಾಡಿವೆ. ಕಾರಟಗಿ, ಕುಕನೂರು ನ್ಯಾಯಾಲಯ ಕಟ್ಟಡಕ್ಕೆ ಭೂಮಿ ಗುರುತಿಸಲಾಗಿದ್ದು, ಟೆಂಡರ್ ಹಂತದಲ್ಲಿವೆ ಎಂದು ತಿಳಿಸಿದರು.