ಕೌಶಲ ವೃದ್ಧಿಸಿಕೊಂಡು ವತ್ತಿಯಲ್ಲಿ ಯಶಸ್ಸು ಸಾಧಿಸಿ

ಕೊಪ್ಪಳದಲ್ಲಿ ಆಯೋಜಿಸಿದ್ದ ರಾಯಚೂರು ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್‌ಐಸಿ ರಾಯಚೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪ್ರಸಾದ ಬಸವರಾಜ ವಾತನಾಡಿದರು. ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಬಿ.ಶ್ರೀನಿವಾಸ, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕಾಂ.ಎಲ್.ಮಂಜುನಾಥ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅರಳಿ ವೀರಣ್ಣ, ಗೌರವಾಧ್ಯಕ್ಷ ದೊಡ್ಡನಗೌಡ ಪಾಟೀಲ, ರಾಯಚೂರು ವಿಭಾಗದ ಅಧ್ಯಕ್ಷ ಕಾಂ.ಶಿವರಾಜ ಪತ್ತೆಪುರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಲ್‌ಐಸಿ ರಾಯಚೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪ್ರಸಾದ ಬಸವರಾಜ ಹೇಳಿಕೆ
  • ಕಾರ್ಯಕಾರಿ ಸಮಿತಿ ಸಭೆ
ಕೊಪ್ಪಳ: ಜೀವ ವಿವಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ತಾಂತ್ರಿಕ ಬದಲಾವಣೆಗಳು ಆಗುತ್ತಿದ್ದು, ಎಲ್‌ಐಸಿ ಸಂಸ್ಥೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡು ಪಾಲಿಸಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಸನ್ನದ್ಧವಾಗಿದೆ ಎಂದು ಎಲ್‌ಐಸಿ ರಾಯಚೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪ್ರಸಾದ ಬಸವರಾಜ ಹೇಳಿದರು.
ನಗರದದಲ್ಲಿ ಅಖಿಲ ಭಾರತ ಜೀವ ವಿವಾ ಸಂಟನೆಯಿಂದ ಬುಧವಾರ ಆಯೋಜಿಸಿದ್ದ ರಾಯಚೂರು ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಾತನಾಡಿದರು. ವಿವಾ ಪ್ರತಿನಿಧಿಗಳು ಜ್ಞಾನ ಮತ್ತು ಕೌಶಲವನ್ನು ನಿರಂತರವಾಗಿ ವದ್ಧಿಸಿಕೊಂಡು ವತ್ತಿಯಲ್ಲಿ ಯಶಸ್ಸು ಸಾಧಿಸಬೇಕು. ಗ್ರಾಹಕರ ವಿಶ್ವಾಸ ಗಳಿಸುವುದರ ಜತೆಗೆ ಸಂಸ್ಥೆಯ ಗುರಿ ಸಾಧನೆಗೆ ಶ್ರಮಿಸಬೇಕು. ಒಗ್ಗಟ್ಟಿನಿಂದ ಪ್ರತಿನಿಧಿಗಳ ವಿವಿಧ ಬೇಡಿಕೆ ಈಡೇರಿಸಲು ಸಾಧ್ಯ ಎಂದರು.
ರಾಯಚೂರು ವಿಭಾಗದ ಅಧ್ಯಕ್ಷ ಕಾಂ.ಶಿವರಾಜ ಪತ್ತೆಪುರ ವಾತನಾಡಿ, ದೇಶದ ಅತಿದೊಡ್ಡ ಸಾರ್ವಜನಿಕ ವಿವಾ ಸಂಸ್ಥೆಯಾದ ಎಲ್‌ಐಸಿಯನ್ನು ಉಳಿಸಿ ಬೆಳೆಸಲು ವಿವಾ ಪ್ರತಿನಿಧಿಗಳ ಹಿತರಕ್ಷಣೆ ಅಗತ್ಯ. ಪ್ರತಿನಿಧಿಗಳ ಹಕ್ಕುಗಳನ್ನು ಕಾಪಾಡಿದರೆ ಭವಿಷ್ಯದಲ್ಲಿ ಸವಾಲುಗಳು ಮತ್ತು ನೀತಿ ಬದಲಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ತಿಳಿಸಿದರು.
ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಬಿ.ಶ್ರೀನಿವಾಸ, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕಾಂ.ಎಲ್.ಮಂಜುನಾಥ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅರಳಿ ವೀರಣ್ಣ, ಗೌರವಾಧ್ಯಕ್ಷ ದೊಡ್ಡನಗೌಡ ಪಾಟೀಲ್, ವಲಯ ಖಜಾಂಚಿ ವಲಿ ಮೊಹಿದ್ದೀನ್, ಪ್ರಮುಖರಾದ ವಿ.ಎಸ್.ಪಾಟೀಲ್, ಮಹಾಂತೇಶ ತೊಂಡಿಹಾಳ, ಶಿವಪುತ್ರಪ್ಪ ಅಬ್ಬಿಗೇರಿ, ಶಿವಪ್ಪ ತೆಂಗಿನಕಾಯಿ, ಎಸ್.ಆರ್.ಹಿರೇಮಠ, ಹನುಮಂತ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net