ಅಲ್ಪಸಂಖ್ಯಾತರ ಯೋಜನೆ ಜಾರಿ ಪರಿಣಾಮಕಾರಿಯಾಗಿರಲಿ

ಕೊಪ್ಪಳದಲ್ಲಿ ಗುರುವಾರ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಯು.ನಾಸೀರ್​ ಅಹ್ಮದ್​ ಅಧ್ಯಕ್ಷತೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ. ರಾಮ್​ ಎಲ್​.ಅರಸಿದ್ದಿ, ಡಿಎಫ್​ಒ ನಿರ್ಮಲಾ ಇದ್ದರು.
ಕೊಪ್ಪಳದಲ್ಲಿ ಗುರುವಾರ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಯು.ನಾಸೀರ್​ ಅಹ್ಮದ್​ ಅಧ್ಯಕ್ಷತೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ. ರಾಮ್​ ಎಲ್​.ಅರಸಿದ್ದಿ, ಡಿಎಫ್​ಒ ನಿರ್ಮಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯು.ನಾಸೀರ್​ ಅಹ್ಮದ್​ ಸೂಚನೆ
  • ಯೋಜನೆಗಳ ಪ್ರಗತಿ ಪರಿಶೀಲನೆ
ಕೊಪ್ಪಳ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡುವಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಯು.ನಾಸೀರ್​ ಅಹ್ಮದ್​ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮುಸ್ಲಿಂ, ಜೈನ್​, ಕ್ರಿಶ್ಚಿಯನ್​, ಸಿಖ್​, ಪಾರ್ಸಿ ಹಾಗೂ ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ವಿದ್ಯಾರ್ಥಿವೇತನ, ಉಚಿತ ಪರೀಕ್ಷಾ ಪೂರ್ವ ತರಬೇತಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯವನ್ನು ಅರ್ಹರಿಗೆ ತಲುಪಿಸಿ. ಗುರಿ ಸಾಧನೆಯಲ್ಲಿ ಹಿಂದಿರುವ ಯೋಜನೆಗಳ ಪ್ರಗತಿ ಸಾಧಿಸು. ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ. ನಿವೇಶನ, ಮನೆ ಹಂಚಿಕೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಇತರ ಯೋಜನೆಗಳನ್ನು ಎಲ್ಲ ಅಧಿಕಾರಿಗಳ ಸಮನ್ವಯದೊಂದಿಗೆ ಅರ್ಹರಿಗೆ ತಲುಪಿಸಿ ಎಂದರು.
ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. 6 ವರ್ಷ ತುಂಬಿದ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲಿಸಿ. ಮಕ್ಕಳ ಕಲ್ಯಾಣ ಯೋಜನೆ ರೂಪಿಸಿ. ಉದ್ಯೋಗವಕಾಶ ಇರುವ ವೃತ್ತಿ ಆಧಾರಿತ ತರಬೇತಿ ನೀಡಿ. ಸಾಗರದಾಚೆ ಉದ್ಯೋಗವಕಾಶ ಬಗ್ಗೆ ಜಾಗೃತಿ ಮೂಡಿಸಿ. ನಿಮ್ಮ ಜಿಲ್ಲೆಯಲ್ಲಿ ಕೋರ್ಸ್​, ತರಬೇತಿ ಇಲ್ಲದಿದ್ದರೆ ಲಭ್ಯವಿರುವ ಕಡೆಗೆ ಕಳಿಸಿ. ಸ್ವಯಂ ಉದ್ಯೋಗಕ್ಕೆ ಬ್ಯಾಂಕಿನಿಂದ ಸಾಲ ಸೌಲಭ್ಯ ಕಲ್ಪಿಸುವಂತೆ ನಿರ್ದೇಶಿಸಿದರು.
ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ. ರಾಮ್​ ಎಲ್​.ಅರಸಿದ್ದಿ, ಡಿಎಫ್​ಒ ನಿರ್ಮಲಾ, ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಜಿಲ್ಲಾ ಸ್ಥಾಯಿ ಸಮಿತಿ ಸದಸ್ಯರಾದ ಪ್ರಶಾಂತ ದೇಸಾಯಿ, ಮೊಹ್ಮದ ನಜಿರುದ್ದೀನ ಮೂಲಿಮನಿ, ಮಹಬೂಬ ಪಾಷಾ ಮಾನ್ವಿ, ಎಂ.ಡಿ.ಸಿರಾಜ್​, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಜ್ಮೀರ ಅಲಿ, ಡಿಎಚ್​ಒ ಡಾ.ಟಿ.ಲಿಂಗರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net