ಗಂಗಾವತಿ ಸಿಬಿಎಸ್ ಗಂಜ್ ಆವರಣದ ಹಮಾಲರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ನಿವೃತ್ತ ಹಮಾಲರಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಕಷ್ಣಪ್ಪ ನಾಯಕ, ಮಂಜುನಾಥ ಡಗ್ಗಿ ಇತರರಿದ್ದರು.
ಗಂಗಾವತಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಸೌಲಭ್ಯಗಳು ಮರೀಚಿಕೆಯಾಗಿದ್ದು, ಹಮಾಲಿ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹೇಳಿದರು.
ನಗರದ ಸಿಬಿಎಸ್ ಗಂಜ್ ಆವರಣದ ಹಮಾಲರ ಕಚೇರಿಯಲ್ಲಿ ಶ್ರೀ ಚನ್ನಬಸವಸ್ವಾಮಿ ಗಂಜ್ ಹಮಾಲಿ ಕಾರ್ಮಿಕರ ಸಂಘದಿಂದ ಭನುವಾರ ಹಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ಕಾರ್ಮಿಕರ ವೇತನ ಹೆಚ್ಚಾಗುತ್ತಿಲ್ಲ.
36ಸಾವಿರ ರೂ.ಕನಿಷ್ಠ ವೇತನ ಯೋಜನೆ ಜಾರಿಗೊಳಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಎಲ್ಲ ಹಮಾಲರಿಗೆ ವಸತಿ ಯೋಜನೆ ಅನುಷ್ಟಾನಗೊಳಿಸಬೇಕಿದೆ ಎಂದರು. ನಾಲ್ವರು ನಿವೃತ್ತ ಹಮಾಲರಿಗೆ ತಲಾ 5ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಐಇತು ನೀಡಲಾಯಿತು.