ಮದ್ಯ ಮಾರಾಟ ನಿಷೇಧಿಸದಿದ್ದರೆ ಹೋರಾಟ

ಮದ್ಯ ಅಕ್ರಮ ಮಾರಾಟ ತಡೆಯುವಂತೆ ಆಗ್ರಹಿಸಿ ಸಿದ್ನೆಕೊಪ್ಪ ಗ್ರಾಮದ ಮಹಿಳೆಯರು ಕುಕನೂರು ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಬುಧವಾರ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ ಉಪಾಧ್ಯಕ್ಷ ಅಂದಪ್ಪ ಕೋಳೂರು, ಗ್ರಾಮದ  ಮಹಿಳೆಯರಾದ ಸಿದ್ದಮ್ಮ, ವಿಶಾಲಾಕ್ಷಿ, ಸುವರ್ಣಾ, ಸಿದ್ದಮ್ಮ, ಚನ್ನಮ್ಮ, ಅಂದಮ್ಮ, ಲಕ್ಷ್ಮಮ್ಮ, ದೇವಕ್ಕ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಆಡಳಿತಕ್ಕೆ ಸಿದ್ನೆಕೊಪ್ಪ ಮಹಿಳೆಯರ ಎಚ್ಚರಿಕೆ
ಕುಕನೂರು: ಮದ್ಯ ಅಕ್ರಮ ಮಾರಾಟ ತಡೆಯುವಂತೆ ಆಗ್ರಹಿಸಿ ತಾಲೂಕಿನ ಸಿದ್ನೆಕೊಪ್ಪ ಗ್ರಾಮದ ಮಹಿಳೆಯರು ಪಟ್ಟಣದಲ್ಲಿ ಬುಧವಾರ ಗ್ರೇಡ್-2 ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿಗೆ ಮನವಿ ಸಲ್ಲಿಸಿದರು.
ಮದ್ಯದ ಚಟಕ್ಕೆ ಜನಸಾಮಾನ್ಯರಲ್ಲದೇ ವಿದ್ಯಾರ್ಥಿಗಳೂ ಬಲಿಯಾಗುತ್ತಿದ್ದು, ಅಬಕಾರಿ ಇಲಾಖೆ ಕಂಡು ಕಾಣದಂತೆ ವರ್ತಿಸುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಕುಡಿದು ಬಂದು ಪುರುಷರು ಕೊಡುವ ಹಿಂಸೆಗೆ ಮನೆಯಲ್ಲಿರುವ ಹೆಣ್ಣು ಮಕ್ಕಳು ರೋಸಿಹೋಗಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ನಮ್ಮ ಗ್ರಾಮ ಸುತ್ತಲಿನ ಬಿನ್ನಾಳ, ಯರೇಹಂಚಿನಾಳ, ಚಿಕ್ಕೆನಕೊಪ್ಪದಂತೆ ನಮ್ಮೂರಿನಲ್ಲೂ ಸಂಪೂರ್ಣ ಮದ್ಯ ಅಕ್ರಮ ಮಾರಾಟ ನಿಷೇಧಿಸಬೇಕು. ಮಾರಾಟಗಾರರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಉಪಾಧ್ಯಕ್ಷ ಅಂದಪ್ಪ ಕೋಳೂರು, ಗ್ರಾಮದ ಮಹಿಳೆಯರಾದ ಸಿದ್ದಮ್ಮ, ವಿಶಾಲಾಕ್ಷಿ, ಸುವರ್ಣಾ, ಸಿದ್ದಮ್ಮ, ಚನ್ನಮ್ಮ, ಅಂದಮ್ಮ, ಲಕ್ಷ್ಮಮ್ಮ, ದೇವಕ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net