ಅಪಾರ ಪಡಿತರ ಅಕ್ಕಿ ಅಕ್ರಮ ಸಂಗ್ರಹ

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ ದಾಳಿ ನಡೆಸಿದ ಆಹಾರ ಹಾಗೂ ಪೊಲೀಸ್​ ಅಧಿಕಾರಿಗಳು.
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ ದಾಳಿ ನಡೆಸಿದ ಆಹಾರ ಹಾಗೂ ಪೊಲೀಸ್​ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಇಬ್ಬರ ವಿರುದ್ಧ ಪ್ರಕರಣ ದಾಖಲು
ಕೊಪ್ಪಳ : ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ, ಸಾಗಣೆ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದ್ದು ಜಾಲ ಆಳದವರೆಗೆ ವಿಸ್ತರಿಸಿರುವ ಶಂಕೆ ಸೃಷ್ಟಿಸಿದೆ. ಗುರುವಾರ ತಡರಾತ್ರಿ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಗಾಳೆಪ್ಪ ಎಂಬುವವರ ಜಮೀನಿನಲ್ಲಿ ಸಂಗ್ರಹಿಸಿದ್ದ ನೂರಾರು ಟನ್​ ಪಡಿತರ ಅಕ್ಕಿ ಕಂಡು ಆಹಾರ ಹಾಗೂ ಪೊಲೀಸ್​ ಅಧಿಕಾರಿಗಳು ದಂಗಾಗಿದ್ದಾರೆ.
ಇತ್ತೀಚೆಗಷ್ಟೆ ಗಂಗಾವತಿ ಮಾರ್ಗವಾಗಿ ರಾಯಚೂರು ಕಡೆಗೆ ತೆರಳುತ್ತಿದ್ದ ಪಡಿತರ ಅಕ್ಕಿ ಗಾಡಿಯನ್ನು ಕನ್ನಡಪರ ಸಂಟನೆಗಳು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದವು. ಆರು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೂಕನಪಳ್ಳಿಯಿಂದ ಅಕ್ಕಿ ಸಾಗಣೆ ಆಗುತ್ತಿತ್ತೆಂದು ತಿಳಿದು ಬಂದಿತ್ತು. ಇದೀಗ ಕೂಕನಪಳ್ಳಿಯಲ್ಲಿಯೇ ಅಂದಾಜು 200 ಟನ್​ನಷ್ಟು ಅಕ್ಕಿ ಪತ್ತೆಯಾಗಿರುವುದು ಪಡಿತರ ಅಕ್ರಮ ಜಾಲವನ್ನು ಮತ್ತೊಮ್ಮೆ ಬಯಲು ಮಾಡಿದೆ.
ಆಹಾರ ಇಲಾಖೆ ಅಧಿಕಾರಿ ರವಿಚಂದ್ರ ಹಾಗೂ ಮುನಿರಾಬಾದ್​ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ಕಿ ವಶಕ್ಕೆ ಪಡೆವ ಕೆಲಸ ನಡೆದಿದ್ದು ಎಲ್ಲವನ್ನು ಸೀಜ್​ ಮಾಡಲಾಗುತ್ತಿದೆ. ಅಕ್ರಮ ಸಂಗ್ರಹಣೆ ಸಂಬಂಧ ಯಮನೂರಪ್ಪ, ಗಾಳೆಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ಕಿ ನಿಖರ ಪ್ರಮಾಣ ದಾಖಲಿಸಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net