ಕನಕಗಿರಿ: ಪಟ್ಟಣದ ಶ್ರಮಿಕರ ಭವನದಲ್ಲಿ ತಾತ್ಕಾಲಿಕವಾಗಿ ನ್ಯಾಯಾಲಯ ಆರಂಭಿಸುವ ಉದ್ದೇಶದಿಂದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಸಿ.ಎಂ.ಪೂಣಚ್ಛ ಅವರು ಭೇಟಿ ನೀಡಿ ಪರಿಶೀಲಿಸಿದರು. ನಗರದಲ್ಲಿ ನ್ಯಾಯಾಲಯ ಆರಂಭಿಸಬೇಕೆಂಬ ಸ್ಥಳೀಯ ಹಾಗೂ ತಾಲೂಕಿನ ಜನರ ಬೇಡಿಕೆ ಬಹುದಿನಗಳಿಂದ ಇದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ಕೋರ್ಟ್ ಆರಂಭಿಸಲು ಶ್ರಮಿಕರ ಭವನ ಪರಿಶೀಲಿಸಿದರು. ಈಗಾಗಲೇ ಕೆಲ ಹೊಸ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯದ ತಾತ್ಕಾಲಿಕ ಸಂಕೀರ್ಣಗಳು ಆರಂಭವಾಗಿವೆ. ಆದರೆ, ಕನಕಗಿರಿಯಲ್ಲಿ ಜಾಗ ಮತ್ತು ಕಟ್ಟಡದ ಸಮಸ್ಯೆಯಿಂದ ಮುಂದೂಡಲಾಗುತ್ತಿತ್ತು ಎಂದು ನ್ಯಾಯಾಧೀಶರು, ವಕೀಲರು ಹೈಕೋರ್ಟ್ ನ್ಯಾಯಾಧೀಶರ ಗಮನಕ್ಕೆ ತಂದರು. ಇದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಸಿ.ಎಂ.ಪೂಣಚ್ಛ ಪ್ರತಿಕ್ರಿಯಿಸಿ ಸ್ಥಳೀಯರು, ಅಧಿಕಾರಿಗಳ ನಿರ್ಧರಾದಂತೆ ತಕ್ಷಣವೇ ಕಾರ್ಯಪ್ರವೃತರಾಗಿ ಸುಣ್ಣ-ಬಣ್ಣ, ಅಗತ್ಯ ಪೀಠೋಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೈಗೊಂಡ ಕಾರ್ಯಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಜೂ.1ರಿಂದ ಪಟ್ಟಣದಲ್ಲಿ ತಾಲೂಕು ಕೋರ್ಟ್ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ವಕೀಲರು, ಸಾರ್ವಜನಿಕರಲ್ಲಿ ಹರ್ಷ: ವಿಧಾನಸಭಾ ಕ್ಷೇತ್ರ ಹಾಗೂ ತಾಲೂಕು ಕೇಂದ್ರವಾಗಿದ್ದರೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕೋರ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಹೈಕೋರ್ಟ್ ನ್ಯಾಯಾಧೀಶ ಸಿ.ಎಂ.ಪೂಣಚ್ಛ ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿರುವುದು ಸ್ಥಳೀಯ ವಕೀಲರು, ಸಾರ್ವಜನಿಕರಲ್ಲಿ ಹರ್ಷ ಉಂಟು ಮಾಡಿದೆ. 5ಎಕರೆ ಜಾಗ ಗುರುತಿಸಿ: ನ್ಯಾಯಾಲಯ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಸತಿ ಸಮುಚ್ಚಯಕ್ಕಾಗಿ ಕನಿಷ್ಟ 5 ಎಕರೆ ಜಮೀನು ಗುರುತಿಸಿ ಒದಗಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೂಚಿಸಿದರು. ಜಿಲ್ಲಾ ಸತ್ರ ಪ್ರಧಾನ ನ್ಯಾ.ಸಿ.ಚಂದ್ರಶೇಖರ, ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ.ಸದಾನಂದ ನಾಗಪ್ಪ ನಾಯಕ, ಹಿರಿಯ ಶ್ರೇಣಿ ನ್ಯಾ.ಬಸವಣ್ಣೆಪ್ಪ ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾ.ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾ.ಮೇಘಾ ಸೋಮಣ್ಣನವರ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ, ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸುಬಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ವಕೀಲರಾದ ಹನುಮೇಶ ಮಹಿಪತಿ, ರಾಮಣ್ಣ ಕುರಿ, ಉಮೇಶ, ಮಾರುತಿ ಮೆತಗಲ್, ನಿರುಪಾದಿ ಚಿಂಚಲಿ, ಸುಭಾಷಚಂದ್ರ ಹುಲಿಹೈದರ, ನಿಂಗೇಶ್ ತಳವಾರ, ರಮೇಶ ಪಾಲಿ, ನಾಗರಾಜ ಗದ್ದಿ, ಹನುಮೇಶ ಹೆಬ್ಬುಲಿ, ಪ್ರಮುಖರಾದ ಗಂಗಾಧರಸ್ವಾಮಿ, ಶರಣಪ್ಪ ಭತ್ತದ ಇತರರಿದ್ದರು. 15ಕೆಎನ್‌ಕೆ 3 ಕನಕಗಿರಿಯ ಎಪಿಎಂಸಿ ಶ್ರಮಿಕ ಭವನದ ಕಟ್ಟಡಕ್ಕೆ ಹೈಕೋರ್ಟ್ ನ್ಯಾ.ಸಿ.ಎಂ.ಪೂಣಚ್ಛ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಸತ್ರ ಪ್ರಧಾನ ನ್ಯಾ.ಸಿ.ಚಂದ್ರಶೇಖರ, ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ಸದಾನಂದ ನಾಗಪ್ಪ ನಾಯಕ, ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು.
ಕನಕಗಿರಿ: ಪಟ್ಟಣದ ಶ್ರಮಿಕರ ಭವನದಲ್ಲಿ ತಾತ್ಕಾಲಿಕವಾಗಿ ನ್ಯಾಯಾಲಯ ಆರಂಭಿಸುವ ಉದ್ದೇಶದಿಂದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಸಿ.ಎಂ.ಪೂಣಚ್ಛ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಗರದಲ್ಲಿ ನ್ಯಾಯಾಲಯ ಆರಂಭಿಸಬೇಕೆಂಬ ಸ್ಥಳೀಯ ಹಾಗೂ ತಾಲೂಕಿನ ಜನರ ಬೇಡಿಕೆ ಬಹುದಿನಗಳಿಂದ ಇದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ಕೋರ್ಟ್ ಆರಂಭಿಸಲು ಶ್ರಮಿಕರ ಭವನ ಪರಿಶೀಲಿಸಿದರು.
ಈಗಾಗಲೇ ಕೆಲ ಹೊಸ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯದ ತಾತ್ಕಾಲಿಕ ಸಂಕೀರ್ಣಗಳು ಆರಂಭವಾಗಿವೆ. ಆದರೆ, ಕನಕಗಿರಿಯಲ್ಲಿ ಜಾಗ ಮತ್ತು ಕಟ್ಟಡದ ಸಮಸ್ಯೆಯಿಂದ ಮುಂದೂಡಲಾಗುತ್ತಿತ್ತು ಎಂದು ನ್ಯಾಯಾಧೀಶರು, ವಕೀಲರು ಹೈಕೋರ್ಟ್ ನ್ಯಾಯಾಧೀಶರ ಗಮನಕ್ಕೆ ತಂದರು.
ಇದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಸಿ.ಎಂ.ಪೂಣಚ್ಛ ಪ್ರತಿಕ್ರಿಯಿಸಿ ಸ್ಥಳೀಯರು, ಅಧಿಕಾರಿಗಳ ನಿರ್ಧರಾದಂತೆ ತಕ್ಷಣವೇ ಕಾರ್ಯಪ್ರವೃತರಾಗಿ ಸುಣ್ಣ-ಬಣ್ಣ, ಅಗತ್ಯ ಪೀಠೋಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೈಗೊಂಡ ಕಾರ್ಯಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಜೂ.1ರಿಂದ ಪಟ್ಟಣದಲ್ಲಿ ತಾಲೂಕು ಕೋರ್ಟ್ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಕೀಲರು, ಸಾರ್ವಜನಿಕರಲ್ಲಿ ಹರ್ಷ: ವಿಧಾನಸಭಾ ಕ್ಷೇತ್ರ ಹಾಗೂ ತಾಲೂಕು ಕೇಂದ್ರವಾಗಿದ್ದರೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕೋರ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಹೈಕೋರ್ಟ್ ನ್ಯಾಯಾಧೀಶ ಸಿ.ಎಂ.ಪೂಣಚ್ಛ ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿರುವುದು ಸ್ಥಳೀಯ ವಕೀಲರು, ಸಾರ್ವಜನಿಕರಲ್ಲಿ ಹರ್ಷ ಉಂಟು ಮಾಡಿದೆ.
5ಎಕರೆ ಜಾಗ ಗುರುತಿಸಿ: ನ್ಯಾಯಾಲಯ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಸತಿ ಸಮುಚ್ಚಯಕ್ಕಾಗಿ ಕನಿಷ್ಟ 5 ಎಕರೆ ಜಮೀನು ಗುರುತಿಸಿ ಒದಗಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೂಚಿಸಿದರು.
ಜಿಲ್ಲಾ ಸತ್ರ ಪ್ರಧಾನ ನ್ಯಾ.ಸಿ.ಚಂದ್ರಶೇಖರ, ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ.ಸದಾನಂದ ನಾಗಪ್ಪ ನಾಯಕ, ಹಿರಿಯ ಶ್ರೇಣಿ ನ್ಯಾ.ಬಸವಣ್ಣೆಪ್ಪ ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾ.ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾ.ಮೇಘಾ ಸೋಮಣ್ಣನವರ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ, ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸುಬಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ವಕೀಲರಾದ ಹನುಮೇಶ ಮಹಿಪತಿ, ರಾಮಣ್ಣ ಕುರಿ, ಉಮೇಶ, ಮಾರುತಿ ಮೆತಗಲ್, ನಿರುಪಾದಿ ಚಿಂಚಲಿ, ಸುಭಾಷಚಂದ್ರ ಹುಲಿಹೈದರ, ನಿಂಗೇಶ್ ತಳವಾರ, ರಮೇಶ ಪಾಲಿ, ನಾಗರಾಜ ಗದ್ದಿ, ಹನುಮೇಶ ಹೆಬ್ಬುಲಿ, ಪ್ರಮುಖರಾದ ಗಂಗಾಧರಸ್ವಾಮಿ, ಶರಣಪ್ಪ ಭತ್ತದ ಇತರರಿದ್ದರು.