ಹೈಕ ಕ.ಕ.ವಾದರೂ ಅಭಿವೃದ್ಧಿ ಶೂನ್ಯ

ರಾಯಚೂರಿನಲ್ಲಿ ಹೈದರಾಬಾದ್ ಕರ್ನಾಟಕ ಜನಾಂದೋಲ ಕೇಂದ್ರದಿಂದ ಆಯೋಜಿಸಿರುವ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ಗಂಗಾವತಿ ಸರ್ಕೀಟ್ ಹೌಸ್‌ನಲ್ಲಿ ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರ್‌ಗೆ ಕೇಂದ್ರದ ಸದಸ್ಯರು ಸೋಮವಾರ ಆಹ್ವಾನ ಪತ್ರಿಕೆ ನೀಡಿದರು. ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಕಲಾವಿದ ವಿಷ್ಣುತೀರ್ಥ ಜೋಶಿ ಆದಾಪುರ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಎ.ಕೆ.ಮಹೇಶಕುಮಾರ, ಹೈದರ್‌ಅಲಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿಕೆ
ಗಂಗಾವತಿ: ಹೈಕ ಭಾಗವನ್ನು ಕಲ್ಯಾಣ ಕರ್ನಾಟಕವನ್ನಾಗಿ ಪರಿವರ್ತಿಸಿದರೂ ಯುವ ಮತ್ತು ದುಡಿವ ವರ್ಗದ ಜನರ ಅಭಿವೃದ್ಧಿ ಕನಸು ಇನ್ನೂ ನನಸಾಗಿಲ್ಲ ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಸರ್ಕೀಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ಕಕ ಭಾಗಕ್ಕೆ 371ಜೆ ವಿಧೇಯಕ ಜಾರಿಯಾದರೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ. ಸಾವಿರಾರು ಕೋಟಿ ರೂ. ಅನುದಾನ ಮಂಜೂರಾದರೂ ಭ್ರಷ್ಟಚಾರ ಮತ್ತು ದುರ್ಬಳಕೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿಲ್ಲ. 12 ವರ್ಷಗಳಲ್ಲಿ 16ಸಾವಿರ ಕೋಟಿ ರೂ.ವೆಚ್ಚ ಮಾಡಿರುವ ಬಗ್ಗೆ ಸರ್ಕಾರ ಹೇಳಿದರೂ, 2022ರ ಸಿಎಬಿ ವರದಿಯಲ್ಲಿ 7ಸಾವಿರ ಕೋಟಿ ರೂ. ದುರ್ಬಳಕೆಯಾಗಿರುವ ಬಗ್ಗೆ ವರದಿಯಾಗಿದೆ. 2025-26ನೇ ಸಾಲಿನಲ್ಲಿ ಸರ್ಕಾರ ಘೋಷಿಸಿದ್ದ 5 ಸಾವಿರ ಕೋಟಿ ರೂ.ಗಳಲ್ಲಿ 800 ಕೋಟಿ ರೂ. ಮಾತ್ರ ಕ್ರಿಯಾಯೋಜನೆ ಸಲ್ಲಿಕೆಯಾಗಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಕಲಾವಿದ ವಿಷ್ಣುತೀರ್ಥ ಜೋಶಿ ಆದಾಪುರ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ರಾಜೇಶ ಅಂಗಡಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ವೀರಣ್ಣ ಭಂಡಾರಿ, ಎ.ಕೆ. ಮಹೇಶಕುಮಾರ, ಹೈದರ್‌ಅಲಿ, ರಾಘವೇಂದ್ರ ತೂನಾ ಇತರರಿದ್ದರು.
24ಕ್ಕೆ ರಾಯಚೂರಲ್ಲಿ ಸಮಾವೇಶ
ಕಕ ವಾಸ್ತವ ಸ್ಥಿತಿ ಗಮನಸೆಳೆಯಲು ಮೇ 24ರಂದು ರಾಯಚೂರಿನ ಕೊಠಾರಿ ಂಕ್ಷನ್ ಹಾಲ್‌ನಲ್ಲಿ 371ಜೆ ವಿಧೇಯಕ ಹೋರಾಟಗಾರರ ಸಮಾವೇಶ, ದುಂಡು ಮೇಜಿನ ಸಭೆ ಮತ್ತು ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. 371ಜೆ ವಿಧೇಯಕ ಸಮರ್ಪಕ ಅನುಷ್ಠಾನ, ಖಾಲಿ ಹುದ್ದೆಗಳ ಭರ್ತಿ, ಅನುದಾನ ಸದ್ಬಳಕೆ ಸೇರಿ ಅಭಿವೃದ್ಧಿ ಪೂರಕ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಕಕ ಭಾಗದ ಪ್ರತಿ ಜಿಲ್ಲೆಗಳಿಂದ 300 ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು, ರಾಜವಂಶಸ್ಥೆ ಲಲಿತಾರಾಣಿ ರಾಯಲುಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net