ಹುಲಿಗಿ ಜಾತ್ರಾ ಮಹೋತ್ಸವ ಕಾರ್ಯಕ್ರಮ

huligemma devi Festival Celebration Program
huligemma devi Festival Celebration Program
Published on

ಪ್ರಮುಖ ಮುಖ್ಯಾಂಶಗಳು

  • ಶಕ್ತಿ ದೇವತೆ ಜಾತ್ರೆ ಮೇ 10ರಿಂದ
ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ 2026ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 10ರಿಂದ ಮೇ 14ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಮೇ 2 ರಿಂದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಪ್ರಾರಂಭವಾಗಲಿವೆ.
ಮೇ 2 ರಂದು ರಾತ್ರಿ 8 ಗಂಟೆಗೆ ಶ್ರೀ ಹುಲಿಗೆಮ್ಮ ಸೇವಿಯವರಿಗೆ ಕಂಕಣಧಾರಣೆ ಮಾಡಲಾಗುವುದು. ಮೇ 10ರಂದು ಸಂಜೆ 7 ಗಂಟೆಗೆ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ಮೇ 11ರಂದು ಅಕ್ಕಿಪಡಿ ಕಾರ್ಯಕ್ರಮ ಹಾಗೂ ಸಂಜೆ 5.30ಕ್ಕೆ ಮಹಾರಥೋತ್ಸವ ನಡೆಯಲಿದೆ.
ಮೇ 12ರಂದು ಬೆಳಗಿನ ಜಾವ 3.30ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾದೇವಿ ಪೂಜೆ, ಬೆಳಗಿನ ಜಾವ 4 ಗಂಟೆಗೆ ಶ್ರೀ ದೇವಿಗೆ ಪ್ರಸಾದ ಕೇಳುವುದು, 4.30 ಗಂಟೆಗೆ ಬಾಳಿದಂಡಿಗೆ ಆರೋಹಣ ಕಾರ್ಯಕ್ರಮಗಳು ನಡೆಯಲಿವೆ. ಮೇ 13ರಂದು ಪಾಯಸ ಮತ್ತು ಅಗ್ನಿಕುಂಡ ಪೂಜೆ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಕೊಂಡದ ಪೂಜೆ, 9 ಗಂಟೆಗೆ ಹಿಡಿದಕ್ಷಿಣೆ ವಿತರಣೆ, 9.30 ಕ್ಕೆ ಪಡಗದ ಪೂಜೆ, ನಂತರ ಬೆಳಗಿನ ಜಾವ 4 ಗಂಟೆಗೆ ಗಂಗಾದೇವಿ ಪೂಜೆ, 4.30 ಗಂಟೆಗೆ ಶ್ರೀದೇವಿಗೆ ಪ್ರಸಾದ ಕೇಳುವುದು, 5.30 ಗಂಟೆಗೆ ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ ನಡೆಯಲಿದ್ದು, ಮೇ 14 ರಂದು ನಸುಕಿನ 6.30 ಗಂಟೆಗೆ ಅಗ್ನಿಕುಂಡ ಕಾರ್ಯಕ್ರಮಗಳು ನಡೆಯಲಿವೆ.
ಈ ವರ್ಫಿ ಜೇಫ್ಠಿ ಮಾಸ ಅಧಿಕ ಬಂದಿರುವುದರಿಂದ, ಕಂಕಣ ವಿಸರ್ಜನೆ ಕಾರ್ಯಕ್ರಮವನ್ನು ಜೂನ್​ 30ರಂದು ರಾತ್ರಿ 8 ಗಂಟೆಗೆ ನಡೆಸಲಾಗುವುದು.
ಜಾತ್ರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಆಂಧ್ರ ಪ್ರದೇಶ ಹಾಗೂ ಮಹಾರಾಫ್ಟ್ರಿ ರಾಜ್ಯಗಳಿಂದಲೂ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಭಕ್ತರು ದೇವಸ್ಥಾನಕ್ಕೆ ನೀಡುವ ಕಾಣಿಕೆ, ಬಂಗಾರ, ಬೆಳ್ಳಿ ಹಾಗೂ ದವಸ ಧಾನ್ಯಗಳನ್ನು ಕಚೇರಿಯಲ್ಲಿ ರಶೀದಿ ಪಡೆದು ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಪ್ರಾಣಿಬಲಿ ನಿಫಿೇಧ ಕಾಯ್ದೆಯನ್ವಯ ಪ್ರಾಣಿಬಲಿಗೆ ಸಂಪೂರ್ಣ ನಿಫಿೇಧ ಹೇರಲಾಗಿದ್ದು, ಉಲ್ಲಂಘಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಮುನಿರಾಬಾದ್​ ರೈಲು ನಿಲ್ದಾಣದಿಂದ ಹಾಗೂ ಕೊಪ್ಪಳ, ಗಂಗಾವತಿ, ಹೊಸಪೇಟೆ ನಗರಗಳಿಂದ ವಿಶೇಫಿ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ.
ಇದಲ್ಲದೆ, ದೇವಸ್ಥಾನದ ಹೊಸ ಕಲ್ಲಿನ ಕಟ್ಟಡ ನಿಮಾರ್ಣ ಕಾಮಗಾರಿ ಸುಮಾರು 999.50 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 1 ಲಕ್ಷ ರೂ. ಮೇಲ್ಪಟ್ಟು ದೇಣಿಗೆ ನೀಡುವ ಭಕ್ತರ ಹೆಸರುಗಳನ್ನು ದೇವಸ್ಥಾನದ ಪ್ರಾಕಾರದಲ್ಲಿ ಶಿಲಾಶಾಸನವಾಗಿ ಕೆತ್ತಲಾಗುವುದು. ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆಯುವಂತೆ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್​ ರಾವ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net