ಬೃಹತ್ ಹೆಬ್ಬಾವು ರಕ್ಷಣೆ

ಅಗಳಕೇರಾ ಬಳಿ ಸೆರೆಹಿಡಿದ ಬೃಹತ್ ಹೆಬ್ಬಾವು. ಉಪ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ, ಸಿಬ್ಬಂದಿ ಲಿಂಗರಾಜ ಕನ್ನಾಳ, ಗೌಸ್ ಮೊಹೀದ್ದೀನ್ ಹಾಗೂ ಉರಗ ರಕ್ಷಕ ಅನಿಲ್ ಪಂಪಣ್ಣ ಇದ್ದರು.
ಅಗಳಕೇರಾ ಬಳಿ ಸೆರೆಹಿಡಿದ ಬೃಹತ್ ಹೆಬ್ಬಾವು. ಉಪ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ, ಸಿಬ್ಬಂದಿ ಲಿಂಗರಾಜ ಕನ್ನಾಳ, ಗೌಸ್ ಮೊಹೀದ್ದೀನ್ ಹಾಗೂ ಉರಗ ರಕ್ಷಕ ಅನಿಲ್ ಪಂಪಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುನಿರಾಬಾದ್ ಅಗಳಕೇರಾ ಬಳಿ ಪತ್ಯಕ್ಷ
  • ಹಾವು ಕಂಡು ಆತಂಕಕ್ಕೊಳಗಾದ ರೈತರು
ಮುನಿರಾಬಾದ್: ಸಮೀಪದ ಅಗಳಕೇರಾ ಗ್ರಾಮದ ಬಳಿ ಮಂಗಳವಾರ ರಾತ್ರಿ ಪತ್ಯಕ್ಷವಾಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಲಾಗಿದೆ.
ಅಗಳಕೇರಾದಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ರೈತರ ಜಮೀನಿನಲ್ಲಿ 12 ಅಡಿ ಉದ್ದ ಹಾಗೂ 30 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ. ಹಾವು ಕಂಡು ಆತಂಕಕ್ಕೊಳಗಾದ ಸ್ಥಳೀಯ ರೈತರು ಮತ್ತು ವಾಹನ ಸವಾರರು ತಕ್ಷಣವೇ ಉರಗ ರಕ್ಷಕ ಅನಿಲ್ ಪಂಪಣ್ಣಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅನಿಲ್ ಹೆಬ್ಬಾವನ್ನು ಸೆರೆಹಿಡಿದು, ಮುನಿರಾಬಾದ್ ಪ್ರಾದೇಶಿಕ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ನಂತರ ಅದನ್ನು ಉಪ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ, ಸಿಬ್ಬಂದಿ ಲಿಂಗರಾಜ ಕನ್ನಾಳ, ಗೌಸ್ ಮೊಹಿನುದ್ದೀನ್ ಹಾಗೂ ಉರಗ ರಕ್ಷಕ ಸೇರಿ ಮುನಿರಾಬಾದ್ ವಲಯ ಅರಣ್ಯ ಪ್ರದೇಶದಲ್ಲಿ ಬಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net