ಗುತ್ತಿಗೆ ಪಡೆದ ಕ್ವಾರಿಯಲ್ಲಿಯೇ ತೆಗೆದ ಕಲ್ಲಿನ ಪ್ರಮಾಣಕ್ಕೆ ತಕ್ಕಂತೆ ರಾಜಧನ ಪಾವತಿಸದವರಿಗೆ ಟನ್ಗೆ 70 ರೂ.ನಂತೆ ದಂಡ ವಿಧಿಸಲಾಗಿದೆ. ಇನ್ನು ಒತ್ತುವರಿ ಮಾಡಿದ ಕಲ್ಲಿನ ಪ್ರಮಾಣಕ್ಕೆ 140 ರೂ.ನಂತೆ ಫೆನಾಲ್ಟಿ ಹಾಕಲಾಗಿದೆ. ಒಟ್ಟು 60 ಲೀಸ್ಗಳಲ್ಲಿ ಒಬ್ಬರಿಗೆ 89,454 ರೂ.ದಂಡ ಹಾಕಿದರೆ, 29 ಜನರಿಗೆ 5ಲಕ್ಷ ರೂ. ನಿಂತ ಒಂದು ಕೋಟಿ ರೂ.ವರೆಗೆ ದಂಡ ಬಿದ್ದಿದೆ. 13 ಜನರಿಗೆ 1-2 ಕೋಟಿ ರೂ., 12 ಜನರಿಗೆ 2&5 ಕೋಟಿ ರೂ., ನಾಲ್ವರಿಗೆ 5-10 ಕೋಟಿ ರೂ. ಹಾಗೂ ಒಬ್ಬರಿಗೆ 11 ಕೋಟಿ ರೂ. ಫೈನ್ ಕಟ್ಟಿ ರಾಯಲ್ಟಿ ಕಟ್ಟುವಂತೆ ಸರ್ಕಾರ ಅವಕಾಶ ನೀಡಿದೆ. ಒಟ್ಟು 60 ಕ್ವಾರಿಗಳಿಗೆ 111,90,58,152ರೂ. ಬೃಹತ್ ದಂಡ ವಿಧಿಸಲಾಗಿದೆ.