ಬಿಸಿಲಿನ ತಾಪಕ್ಕೆ ಡೋಂಟ್ ಕೇರ್

ತಾವರಗೇರಾ ಬಸ್ ನಿಲ್ದಾಣದಲ್ಲಿ ಪ್ರಯಾಣಕ್ಕೆ ಹರಸಾಹಸ ಪಡುತ್ತಿರುವ ಜನರು.
ತಾವರಗೇರಾ ಬಸ್ ನಿಲ್ದಾಣದಲ್ಲಿ ಪ್ರಯಾಣಕ್ಕೆ ಹರಸಾಹಸ ಪಡುತ್ತಿರುವ ಜನರು.
Published on

ಪ್ರಮುಖ ಮುಖ್ಯಾಂಶಗಳು

  • ಜನರಿಂದ ತುಂಬಿ ತುಳುಕುತ್ತಿರುವ ಬಸ್‌ಗಳು
  • ಜೇಬುಗಳ್ಳರಿಗೆ ಹಬ್ಬ
ತಾವರಗೇರಾ: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದ್ದರೂ ಇಲ್ಲಿನ ಬಸ್ ನಿಲ್ದಾಣದಲ್ಲಿ ಇಳಿಕೆ ಆಗಬೇಕಿದ್ದ ಪ್ರಯಾಣಿಕರ ಸಂಖ್ಯೆ ಹೆಳ್ಳವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಜೇಬುಗಳ್ಳರು ತಮ್ಮ ಕೈಚಳ ತೋರಿಸುತ್ತಿದ್ದಾರೆ.
ಸುಡು ಬಿಸಿಲನ್ನೂ ಲೆಕ್ಕಿಸದೆ ಜನರು ಬಸ್ ಏರಲು, ವಿಶೇಷವಾಗಿ ಮಹಿಳೆಯರು ಪೈಪೋಟಿ ನಡೆಸುತ್ತಿರುವ ಚಿತ್ರಣ ಕಂಡು ಬರುತ್ತಿದೆ. ಬಿಸಿಲಿನ ಪ್ರಖರತೆಗೆ ಅಸ್ವಸ್ಥತೆ, ಸುಸ್ತು ಇತರ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದರೂ ಅವು ಯಾವನ್ನೂ ಲೆಕ್ಕಿಸದೆ ಮದುವೆ, ಗೃಹ ಪ್ರವೇಶ, ಪ್ರವಾಸ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜನರು ಪ್ರಯಾಣಿಸುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಬೆಳಗ್ಗೆ 11ರಿಂದ ಸಂಜೆ 4ವರೆಗೆ ಹೊರಗೆ ತಿರುಗಾಡಬಾರದು ಎಂದು ಅಧಿಕಾರಿಗಳು ಸೂಚನೆ ಕೊಡುತ್ತಿದ್ದರೂ ಜನರು ಪಾಲಿಸುತ್ತಿಲ್ಲ.
ತಾವರಗೇರಾ ಬಸ್‌ನಿಲ್ದಾಣದಲ್ಲಿ ಪ್ರತಿದಿನ 300ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಕಳೆದ 15 ದಿನಗಳಿಂದ ಪ್ರತಿದಿನ ಅಂದಾಜು 3-4 ಸಾವಿರ ಪ್ರಯಾಣಿಕರು ಹತ್ತಿಳಿಯುತ್ತಾರೆ. ಯಾವುದೇ ಬಸ್ ಇರಲಿ ನಿಲ್ದಾಣದಲ್ಲಿ ಬರುತ್ತಲೇ ಹತ್ತಲು ಪೈಪೋಟಿ ಇರುತ್ತದೆ. ಜೇಬುಗಳ್ಳರಿಗಂತೂ ಇಂತಹ ಸಂದರ್ಭ ಹಬ್ಬವೇ ಹಬ್ಬ. ಪೊಲೀಸ್‌ರಂತೂ ಬಸ್ ನಿಲ್ದಾಣದ ಕಡೆಗೆ ಮುಖ ಮಾಡುವದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಬಸ್ ಪ್ರಯಾಣದ ಭರಾಟೆಯಲ್ಲಿ ಜನರು ಮಾತ್ರ ಪ್ರತಿದಿನ ಮೊಬೈಲ್, ಹಣ ಕಳೆದು ಕೊಳ್ಳುತ್ತಿದ್ದಾರೆ.
"

ಕೊಪ್ಪಳದಲ್ಲಿ ನೆಂಟರ ಮನೆ ಓಪನಿಂಗ್ ಇದೆ. ಹೋಗಲೇಬೇಕು, ಬಸ್‌ಗಳು ಪ್ರಯಾಣಿಕರಿಂದ ಫುಲ್ ಆಗಿ ಬರುತ್ತಿವೆ. ಹತ್ತಲು ರಾಡ್ ಹಿಡಿದರೆ ಅವೂ ಸಹ ಸುಡುತ್ತಿವೆ. ಇಂತಹ ಸಂಕಷ್ಟದಲ್ಲೇ ಜೇಬುಗಳ್ಳರ ಕಾಟ ನಮ್ಮನ್ನು ಆರ್ಥಿಕವಾಗಿ ಕುಗ್ಗಿಸುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಮಕ್ಕಳನ್ನು ಕಟ್ಟಿಕೊಂಡು ಸಂಬಂಧಿಕರ ಮದುವೆಗೆ ಹೊರಟಿದ್ದೇವೆ. ಬಿಸಿಲಿಗೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಏರಲು ನಮ್ಮಂತಹ ವಯಸ್ಸಾದವರಿಗೆ ಸಾಧ್ಯವಾಗುತ್ತಿಲ್ಲ.

ಕಳೆದೊಂದು ತಿಂಗಳ ಅವಧಿಯಲ್ಲಿ ಮೊಬೈಲ್ ಕಳೆದುಕೊಂಡವರಲ್ಲಿ 15 ಜನರು ದೂರು ದಾಖಲಿಸಿದ್ದಾರೆ. ಕೆಲ ಪ್ರಯಾಣಿಕರ ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದೇವೆ. ಅನೇಕರು ಹಣ, ಮೊಬೈಲ್ ಕಳೆದುಕೊಂಡಿದ್ದರೂ ದೂರು ಕೊಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net