ಹಾಸ್ಟೆಲ್ ಉಪ ಸಮಿತಿ ರಾಜ್ಯ ಸಹ ಸಂಚಾಲಕ ಎಂ.ಡಿ.ಶರ್ೀ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳಾದರೂ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ. ಈಗಾಗಲೇ ಪಾಠಗಳು ಆರಂಭವಾಗಿದ್ದು, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ತರಗತಿ ತಪ್ಪಿಸುವಂತಿಲ್ಲ. ಹಾಸ್ಟೆಲ್ ಪಟ್ಟಿ ಪ್ರಕಟವಾಗದಿದ್ದರಿಂದ ನಿತ್ಯವೂ ವಾಹನಗಳ ಮೂಲಕ ಬರುವಂತಾಗಿದೆ. ಹಾಸ್ಟೆಲ್ ಪಟ್ಟಿ ವಿಳಂಬದಿಂದ ಕೆಲವರು ಶಿಕ್ಷಣದಿಂದ ದೂರ ಉಳಿಯುತ್ತಿದ್ದು, ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಬಿಸಿಎಂ, ಪಜಾ, ಪಪಂ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳಿಗೆ ಜೂ.19ರೊಳಗೆ ಆಯ್ಕೆಪಟ್ಟಿ ಬಿಡುಗಡೆಗೊಳಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರು ಆದೇಶಿಸಿದ್ದರೂ ಇದುವರೆಗೆ ಪ್ರಕಟವಾಗಿಲ್ಲ.