ಶ್ರಮಿಕರ ನೆನೆದ ಮನೆ ಮಾಲೀಕ

ಮನೆಕಟ್ಟಲು ಶ್ರಮಿಸಿದ ಕಾರ್ಮಿಕರ ಹೆಸರಿನ ಫ್ಲೇಕ್ಸ್ ಮನೆ ಗೋಡೆಗೆ ನೇತು ಹಾಕಿರುವುದು.
ಮನೆಕಟ್ಟಲು ಶ್ರಮಿಸಿದ ಕಾರ್ಮಿಕರ ಹೆಸರಿನ ಫ್ಲೇಕ್ಸ್ ಮನೆ ಗೋಡೆಗೆ ನೇತು ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮೇಸ್ತ್ರಿ ಇತರ ನೌಕರರ ಫ್ಲೆಕ್ಸ್​ ಹಾಕಿಸಿ ಗೃಹ ಪ್ರವೇಶ
ಕೊಪ್ಪಳ : ಸಾಮಾನ್ಯವಾಗಿ ನಿತ್ಯ ಹತ್ತಾರು ಹೊಸ ಮನೆಗಳ ಅದ್ದೂರಿ ಗೃಹ ಪ್ರವೇಶ ಕಾಣುತ್ತೇವೆ. ಮನೆ ಒಡೆಯ ಅದ್ಭುತ ಮನೆ ಕಟ್ಟಿಸಿದ್ದಾನೆ ಎಂಬೆಲ್ಲ ಮಾತು ಸಾಮಾನ್ಯ. ಮಾಲೀಕರು ತಂದೆ&ತಾಯಿ ಅಥವಾ ದೇವರ ಆಶೀರ್ವಾದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಕೃತಜ್ಞೆ ಸಲ್ಲಿಸುವುದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಮನೆ ಮಾಲೀಕ ಮನೆ ಕಟ್ಟಲು ಶ್ರಮಿಸಿದ ಮೇಸ್ತ್ರಿ ಸೇರಿ ಇತರ ನೌಕರರ ಹೆಸರಿನಲ್ಲಿ ಫ್ಲೇಕ್ಸ್​ ಹಾಕಿಸಿ ಗೌರವ ಸಲ್ಲಿಸಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಅಭಿಷೇಕ ದೇಸಾಯಿ ಎಂಬುವವರು ಫೆ.21ರಂದು ಸತ್ಯನಾರಾಯಣ ಬಡಾವಣೆಯಲ್ಲಿನ ತಮ್ಮ ನೂತನ ಗೃಹ ಪ್ರವೇಶ ಮಾಡಿದ್ದಾರೆ. ಈ ವೇಳೆ ಮನೆಯವರು, ಹಿತೈಷಿಗಳು, ಪ್ರಮುಖರು ಒಂದೆರಡು ದಿನ ಮುಂಚೆಯೇ ದೊಡ್ಡ ದೊಡ್ಡ ಫ್ಲೆಕ್ಸ್​ ಹಾಕಿಸಿ ಶುಭಕೋರಿದ್ದಾರೆ. ಇದನ್ನು ಕಂಡು ನಿಜವಾದ ಶ್ರಮಿಕರಿಗೆ ಗೌರವ ಸಲ್ಲಿಸಬೇಕೆಂಬ ಭಾವನೆ ಬಂದಿದೆ. ಅದಕ್ಕೆ ಮನೆಗೆ ಪಾಯ ಹಾಕಿದ ಇಂಜಿನಿಯರ್​ ಸೇರಿ ಮೇಸ್ತ್ರಿ, ಪ್ಲಂಬರ್​, ಎಲೆಕ್ಟ್ರಿಷಿಯನ್​ ಇತರರ ಹೆಸರಿನ ಫ್ಲೆಕ್ಸ್​ ಹಾಕಿಸಿದ್ದಾರೆ. ದ್ವಾರ ಭಾಗಿಲಿನಲ್ಲಿಟ್ಟು ಇವರೇ ಸುಂದರ ಮನೆ ನಿರ್ಮಿಸಿದವರೆಂದು ಬಂದ ಅತಿಥಿಗಳಿಗೆ ಪರಿಚಯಿಸಿ ಗೌರವಿಸಿದ್ದಾರೆ. ಬಂದ ಗಣ್ಯರಿಗೆ ಒಂದೊಂದು ಸಸಿ ನೀಡಿ ಪರಿಸರ ಕಾಳಜಿ ಮೆರೆದಿರುವುದು ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net