ಕನಕಗಿರಿ ತಾಲೂಕಿನ ಹಿರೇಡಂಕನಕಲ್ ಗ್ರಾಮದ ಬಡ ಕೃಷಿ ಕೂಲಿಕಾರರು, ಕಟ್ಟಡ ಕಾರ್ಮಿಕರಿಗೆ ಮನೆ, ನಿವೇಶನ ಮಂಜೂರು ಮಾಡಲು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಗ್ರಾಮ ಘಟಕದಿಂದ ಪ್ರಭಾರ ಪಿಡಿಒ ಹನುಮಂತಪ್ಪಗೆ ಸೋಮವಾರ ಮನವಿ ಸಲಿಸಲಾಯಿತು.
ಕನಕಗಿರಿ: ತಾಲೂಕಿನ ಹಿರೇಡಂಕನಕಲ್ ಗ್ರಾಮದ ಬಡ ಕೃಷಿ ಕೂಲಿಕಾರರು, ಕಟ್ಟಡ ಕಾರ್ಮಿಕರಿಗೆ ಮನೆ, ನಿವೇಶನ ಮಂಜೂರು ಮಾಡಲು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಗ್ರಾಮ ಘಟಕದಿಂದ ಪ್ರಭಾರ ಪಿಡಿಒ ಹನುಮಂತಪ್ಪಗೆ ಸೋಮವಾರ ಮನವಿ ಸಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ರಮೇಶ ಬಡಿಗೇರ ಮಾತನಾಡಿ, ಹಿರೇಡಂಕನಕಲ್ ಗ್ರಾಮದಲ್ಲಿ ಕೃಷಿ-ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಂದೇ ಮನೆಯಲ್ಲಿ 8-9 ಜನರು ವಾಸಿಸುವಂತಹ ದುಸ್ಥಿತಿ ಇದೆ. ಮಲಗಲು ಸಹ ಜಾಗವಿಲ್ಲದಂತಾಗಿದೆ. ಕೂಲಿ ನಾಲಿ ಮಾಡಿ ಕುಟುಂಬ ನಿರ್ವಹಿಸುತ್ತಿದ್ದು, ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಳ್ಳುವುದು ಕನಸಿನ ಮಾತಾಗಿದೆ. ಅದಕ್ಕಾಗಿ ವಸತಿ ರಹಿತರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನದ ಜತೆಗೆ ಮನೆ ನಿರ್ಮಿಸಿಕೊಡಬೇಕಾಗಿದೆ. ಗ್ರಾಮಾಡಳಿತ ಕೂಡಲೇ ಸರ್ಕಾರಿ ಭೂಮಿ ಇಲ್ಲವೇ, ಗ್ರಾಮಕ್ಕೆ ಹತ್ತಿರದ ಪಟ್ಟಾ ಭೂಮಿಯನ್ನು ಖರೀದಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ಎಂ., ತಾಲೂಕು ಪ್ರಧಾನ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಗ್ರಾಮ ಘಟಕದ ಅಧ್ಯಕ್ಷ ಯಮನೂರಪ್ಪ ಕುಂಬಾರ, ಉಪಾಧ್ಯಕ್ಷ ಕರಿಯಪ್ಪ ಭೋವಿ, ಕಾರ್ಯದರ್ಶಿ ಪಂಪಾಪತಿ ಅಲಯಕುಣಿ, ಮಂಜುನಾಥ, ಈರಣ್ಣ, ನಿಂಗಪ್ಪ ಇತರರಿದ್ದರು.