ದೇವರಿಗಿಂತ ಗುರುವಿಗೆ ಮೊದಲ ಆದ್ಯತೆ

ಕನಕಗಿರಿ ತೊಂಡಿತೇವರಪ್ಪ ದೇವಸ್ಥಾನದಲ್ಲಿ ಗುರುಪೂರ್ಣಮೆ ನಿಮಿತ್ತ ಹಿರಿಯ ಕಲಾವಿದರಾದ ತೊಂಡೆಪ್ಪ, ಪರಂಧಾಮರೆಡ್ಡಿ, ಕಂಠೆಪ್ಪ ಪೂಜಾರ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರನ್ನು ಸನ್ಮಾನಿಸಲಾಯಿತು. ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಕನಕರೆಡ್ಡಿ ಕೆರಿ, ಭಜನಾ ಮಂಡಳಿ ಅಧ್ಯಕ್ಷ ರಾಮಣ್ಣ ಗುಂಜಳ್ಳಿ, ಹಿರಿಯರಾದ ಸುರೇಶರೆಡ್ಡಿ ಮಹಲಿನಮನಿ, ಪಂಪಾಪತಿ ತುಪ್ಪದ, ಭೀಮರೆಡ್ಡಿ ಓಣಿಮನಿ, ಅಂಬಾಜಿರಾವ್ ಬೊಂದಾಡೆ, ಸುರೇಶ ಬೊಂದಾಡೆ, ಶಿವಪ್ಪ ಅಂಕಸದೊಡ್ಡಿ ಇತರರಿದ್ದರು.

Published on
ಕನಕಗಿರಿ: ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದ್ದು, ಜನ್ಮ ಸಾರ್ಥಕವಾಗಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯ ಎಂದು ಹಿರಿಯ ಹಾರ್ಮೋನಿಯಂ ಕಲಾವಿದ ಪರಂಧಾಮರೆಡ್ಡಿ ಬೀರಳ್ಳಿ ಹೇಳಿದರು.
ತೊಂಡಿತೇರಪ್ಪ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಬುಧವಾರ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯಿಂದ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಗಳಿಗೆ ಪವಿತ್ರ ಸ್ಥಾನ ನೀಡಿದ ಅಪರೂಪದ ಪರಂಪರೆ ನಮ್ಮ ದೇಶದಲ್ಲಿದೆ. ಗುರುಗಳಿಗೆ ಗೌರವಿಸುವುದು, ಗುರು ಕಾಣಿಕೆ ನೀಡಿ ಸತ್ಕರಿಸುವ ಕಾರ್ಯ ನಡೆಯುವುದು ಇಂದಿಗೂ ಪ್ರಚಲಿತದಲ್ಲಿದೆ. ಪಾಪ, ಪುಣ್ಯಗಳು ಮನುಷ್ಯನಿಂದ ಹುಟ್ಟಿಕೊಂಡಿವೆಯೇ ಹೊರತು ದೇವರುಗಳಿಂದ ಅಲ್ಲ. ದೇವರೇ ಗುರುವಿನ ರೂಪದಲ್ಲಿ ಬಂದು ಮನುಷ್ಯನ ಪಾಪಗಳನ್ನು ಪರಿಹಾರ ಮಾಡುತ್ತಾನೆ. ಅದಕ್ಕಾಗಿ ದೇವರಿಗಿಂತ ಗುರುವಿಗೆ ಮೊದಲ ಆದ್ಯತೆ ಇದೆ ಎಂದರು. ಕಲಾವಿದರಾದ ತೊಂಡೆಪ್ಪ, ಪರಂಧಾಮರೆಡ್ಡಿ, ಕಂಠೆಪ್ಪ ಪೂಜಾರ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net