ಎಚ್​.ಕೆ ಯುವಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿ

ಕೊಪ್ಪಳದ ಬೆಂಕಿನಗರ ಸರ್ಕಾರಿ ಪ್ರೌಢಶಾಲೆ, ಕಾಳಿದಾಸ ಕಾಲೇಜು, ಮುರಾರ್ಜಿ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಇತ್ತೀಚೆಗೆ ಭೇಟಿ ನೀಡಿ ಸೇನೆಗೆ ಸೇರುವ ಕರಿತು ನಡೆಸಿದ ಜಾಗೃತಿ ಅಭಿಯಾನದಲ್ಲಿ ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಸಹಾಯಕ ಅಧಿಕಾರಿ ಸುಬೆದಾರ್​ ಮೇಜರ್​ ಮನೋಜಕುಮಾರ್​ ಮಾತನಾಡಿದರು. ಹವಾಲ್ದಾರ್​ ಬ್ರಾಜ್​ ಕಿಶೋರ್​, ಪ್ರಾಂಶುಪಾಲರಾದ ನಾಗರಾಜ್​, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಾರುತಿ ಗೊಂದಿ, ಇಂದುಧರ ಸೊಪ್ಪಿಮಠ, ಹೇಮಂತಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮನೋಜಕುಮಾರ್​ ಸೂಚನೆ
  • ಸೇನಾ ನೇಮಕಾತಿ
ಕೊಪ್ಪಳ : ಭಾರತೀಯ ಸೇನೆಯ ನೇಮಕಾತಿ ರ್ಯಾಲಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇಶಸೇವೆಗೆ ಮುಂದಾಗಬೇಕು ಎಂದು ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಸಹಾಯಕ ಅಧಿಕಾರಿ ಸುಬೆದಾರ್​ ಮೇಜರ್​ ಮನೋಜಕುಮಾರ್​ ಕರೆ ನೀಡಿದರು.
ನಗರದ ಬೆಂಕಿನಗರ ಸರ್ಕಾರಿ ಪ್ರೌಢಶಾಲೆ, ಕಾಳಿದಾಸ ಕಾಲೇಜು, ಮುರಾರ್ಜಿ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಇತ್ತೀಚೆಗೆ ಭೇಟಿ ನೀಡಿ ಸೇನೆಗೆ ಸೇರುವ ಕರಿತು ನಡೆಸಿದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಹವಾಲ್ದಾರ್​ ಬ್ರಾಜ್​ ಕಿಶೋರ್​ ಮಾತನಾಡಿ, ನೇಮಕಾತಿಯಲ್ಲಿ ವಿಫಲವಾದರೆ ಎದೆಗುಂದದೆ ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಖಚಿತ. ಕೇಂದ್ರ ಸರ್ಕಾರದ ಈ ನೇಮಕಾತಿ ಅವಕಾಶವನ್ನು ಯುವಕರು ಬಳಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ನಾಗರಾಜ್​, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಾರುತಿ ಗೊಂದಿ, ಇಂದುಧರ ಸೊಪ್ಪಿಮಠ, ಹೇಮಂತಪ್ಪ, ವಾಸಪ್ಪ ಚಲ್ಲಾ, ಸಿದ್ದಲಿಂಗಪ್ಪ ಮತ್ತು ರಮೇಶ್​ ಬಲ್ಲೋಟಗಿ, ರವೀಂದ್ರ ಎ., ಎಎನ್​ಓ ಪರಶುರಾಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net