ಸಾರ್ವಜನಿಕ ಸಹಾಯವಾಣಿ ಆರಂಭಿಸಲು ಹಿಟ್ನಾಳ ಸೂಚನೆ

ಕೊಪ್ಪಳದಲ್ಲಿ ಶುಕ್ರವಾರ ಶಾಸಕ ರಾವೇಂದ್ರ ಹಿಟ್ನಾಳ ಅಧ್ಯಕ್ಷತೆಯಲ್ಲಿ ನಗರಸಭೆ ಅಧಿಕಾರಿಗಳ ಸಭೆನಡೆಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರ್​ ಸಾಬ್​ ಇದ್ದರು.
ಕೊಪ್ಪಳದಲ್ಲಿ ಶುಕ್ರವಾರ ಶಾಸಕ ರಾವೇಂದ್ರ ಹಿಟ್ನಾಳ ಅಧ್ಯಕ್ಷತೆಯಲ್ಲಿ ನಗರಸಭೆ ಅಧಿಕಾರಿಗಳ ಸಭೆನಡೆಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರ್​ ಸಾಬ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾವೇಂದ್ರ ಹಿಟ್ನಾಳ ಸೂಚನೆ
  • ಅಧಿಕಾರಿಗಳ ಸಭೆ

ಕೊಪ್ಪಳ: ನಗರ ಹಾಗೂ ಭಾಗ್ಯನಗರ ಪಟ್ಟಣ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ ಆರಂಭಿಸುವಂತೆ ಶಾಸಕ ರಾವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೊಪ್ಪಳದ 31 ಹಾಗೂ ಭಾಗ್ಯನಗರ ಪಟ್ಟಣದ 19ವಾರ್ಡ್​ಗಳಿಗೆ ತಲಾ20&25 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಸೆಪ್ಟಂಬರ್​ ಮೊದಲ ವಾರದಿಂದ ವಾರ್ಡ್​ವಾರು ಹಾಕಿಕೊಂಡ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸುವೆ. ಕೊಪ್ಪಳ&ಭಾಗ್ಯನಗರಕ್ಕೆ ಶುದ್ಧ ಕುಡಿವ ನೀರು ಒದಗಿಸುವ 138 ಕೋಟಿ ರೂ. ಕಾಮಗಾರಿ ಶೇ.80ರಷ್ಟು ಮುಗಿದಿದೆ. ಬಾಕಿ ಕೆಲಸ ಮುಗಿಸಿ ಇನ್ನೆರಡು ತಿಂಗಳಲ್ಲಿ ನೀರು ಒದಗಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ರಾಜಕಾಲುವೆ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿರುವೆ. ಅತಿಕ್ರಮಣ ತೆರವಿಗೆ ಸೂಚಿಸಿರುವೆ. ಎರಡು ಕಾಲುವೆ ಪೈಕಿ ಒಂದು ಈ ವರ್ಷ, ಇನ್ನೊಂದು ಮುಂದಿನ ವರ್ಷ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿ. 31 ವಾರ್ಡ್​ಗಳಲ್ಲಿ ಎಲ್ಲ ಚರಂಡಿ 15ದಿನದೊಳಗೆ ಸ್ವಚ್ಛಗೊಳಿಸಿ. ಜನರ ಅಹವಾಲು ಸಲ್ಲಿಕೆಗೆ ಸಹಾಯವಾಣಿ ಆರಂಭಿಸಿ. ನಿತ್ಯ ಬರುವ ಕರೆ ದಾಖಲಿಸಿಕೊಂಡು ಪರಿಹಾರ ಕಲ್ಪಿಸಿ. ಎಲ್ಲ ಅಧಿಕಾರಿಗಳು ನಿಮ್ಮ ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ತಾಕೀತು ಮಾಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರ್​ ಸಾಬ್​, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ಕುಡಾ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಪ್ರಮುಖರಾದ ಎಂ.ಕಾಟನ್​ ಪಾಷಾ, ರಾಜಶೇಖರ ಆಡೂರು, ಸಿದ್ದು ಮ್ಯಾಗೇರಿ, ಪಪಂ ಮುಖ್ಯಾಧಿಕಾರಿ ಸುರೇಶ್​ ಬಬಲಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net