ಕಂದಾಯ ಗ್ರಾಮ ಘೋಷಣೆಗೆ ಆಗ್ರಹ

ಗಂಗಾವತಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸೋಮವಾರ ಕೊರಮ್ಮ ಕ್ಯಾಂಪ್ ನಿವಾಸಿಗಳು ಮನವಿ ಸಲ್ಲಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಬಾಬು, ಗ್ರಾಪಂ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ ಇತರರಿದ್ದರು.
ಗಂಗಾವತಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸೋಮವಾರ ಕೊರಮ್ಮ ಕ್ಯಾಂಪ್ ನಿವಾಸಿಗಳು ಮನವಿ ಸಲ್ಲಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಬಾಬು, ಗ್ರಾಪಂ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊರಮ್ಮ ಕ್ಯಾಂಪ್ ನಿವಾಸಿಗಳಿಂದ ಪಾದಯಾತ್ರೆ
  • ಕಂದಾಯ ನಿರೀಕ್ಷಕನ ಅಮಾನತಿಗೆ ಪಟ್ಟು
ಗಂಗಾವತಿ: ಕೊರಮ್ಮ ಕ್ಯಾಂಪ್ (ಬಸವನದುರ್ಗ) ಅನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಕ್ಯಾಂಪ್‌ನಿಂದ ನಗರದ ತಾಲೂಕಾಡಳಿತ ಸೌಧದ ಕಚೇರಿವರೆಗೆ ಸೋಮವಾರ ಪಾದಯಾತ್ರೆ ನಡೆಸಿದರು.
ಗ್ರಾಮದ ಗ್ರಾಮದೇವತೆ ಕೊರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಗ್ರಾಮಸ್ಥರು ಪಾದಯಾತ್ರೆ ಮೂಲಕ ಕಚೇರಿಗೆ ಆಗಮಿಸಿ ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸಲ್ಲಿಸಿದರು.
ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ, ಕೊರಮ್ಮ ಕ್ಯಾಂಪ್‌ಗೆ ಹಲವು ವರ್ಷಗಳ ಇತಿಹಾಸವಿದ್ದು, ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳ ದಾಖಲಾತಿಗಳಿವೆ. ಆದರೆ ಕಂದಾಯ ನಿರೀಕ್ಷಕ ಬಷೀರುದ್ದೀನ್ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಕಂದಾಯ ಗ್ರಾಮ ಘೋಷಣೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕ್ಯಾಂಪ್‌ನಲ್ಲಿ 400ಕ್ಕೂ ಹೆಚ್ಚು ಕುಟುಂಬಗಳಿದ್ದು, 1500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಕಂದಾಯ ಗ್ರಾಮಕ್ಕೆ ಪೂರಕವಾದ ದಾಖಲೆಗಳಿಲ್ಲ ಎಂದು ಸುಳ್ಳು ಮಾಹಿತಿ ನೀಡಿರುವ ಕಂದಾಯ ನಿರೀಕ್ಷಕರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಬಾಬು ಮಾತನಾಡಿ, ಕಂದಾಯ ಗ್ರಾಮವಾಗಲು ಕೊರಮ್ಮ ಕ್ಯಾಂಪ್ ಅರ್ಹತೆಯಿದ್ದು, ದಾಖಲೆಗಳಿವೆ. ಕಂದಾಯ ನಿರೀಕ್ಷಕರ ಎಡವಟ್ಟಿನಿಂದ ಕ್ಯಾಂಪ್‌ಗೆ ತೊಂದರೆಯಾಗಿದ್ದು, ಸೌಲಭ್ಯಗಳು ಮರೀಚಿಕೆಯಾಗಲಿವೆ. ಅಧಿಕಾರಿಗಳು ಮರು ಪರಿಶೀಲಿಸಿ ಕಂದಾಯ ಗ್ರಾಮವನ್ನಾಗಿ ಘೋಷಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಪ್ರಮುಖರಾದ ರಾಜಶೇಖರ, ರಾಮಕೃಷ್ಣ ನಾಯಕ, ಯಮನಪ್ಪ ಲೈನ್‌ದಾರ್, ಸಲೀಂ ಪಾಷಾ, ಎ.ರಮೇಶ, ಶ್ರೀನಿವಾಸ ರೆಡ್ಡಿ, ನಾಗೀರೆಡ್ಡಿ, ಗೋಪಾಲರೆಡ್ಡಿ, ಜಗದೀಶ, ಮಂಜುನಾಥ ಜಂಗರ್, ವೇಣುಗೋಪಾಲ, ಎ.ರವಿ, ರಾಮನಗೌಡ, ರಂಗಪ್ಪ, ಅಮರೇಶ, ಸೂಗಪ್ಪ, ಬೇಗಂ, ರೇಣುಕಮ್ಮ, ದುರುಗಮ್ಮ, ಯಮನಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net