ಹೆಲ್ಮೆಟ್​ ಕಡ್ಡಾಯ ಆ.1ರಿಂದ

ಕೊಪ್ಪಳದಲ್ಲಿ ಶನಿವಾರ ಹೆಲ್ಮೆಟ್​ ಧರಿಸುವಂತೆ ಸವಾರರಿಗೆ ಹೂ ನೀಡಿ ಜಾಗೃತಿ ಮೂಡಿಸಿದ ಟ್ರಾಫಿಕ್​ ಪಿಎಸ್​ಐ ವೆಂಕಟೇಶ ಹಾಗೂ ಸಿಬ್ಬಂದಿ.
ಕೊಪ್ಪಳದಲ್ಲಿ ಶನಿವಾರ ಹೆಲ್ಮೆಟ್​ ಧರಿಸುವಂತೆ ಸವಾರರಿಗೆ ಹೂ ನೀಡಿ ಜಾಗೃತಿ ಮೂಡಿಸಿದ ಟ್ರಾಫಿಕ್​ ಪಿಎಸ್​ಐ ವೆಂಕಟೇಶ ಹಾಗೂ ಸಿಬ್ಬಂದಿ.
Published on

ಪ್ರಮುಖ ಮುಖ್ಯಾಂಶಗಳು

  • ಹೂ ನೀಡಿ ಜಾಗೃತಿ ಮೂಡಿಸಿದ ಪೊಲೀಸರು
ಕೊಪ್ಪಳ : ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್​ ಕಡ್ಡಾಯಗೊಳಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಸಂಚಾರಠಾಣೆ ಸಿಬ್ಬಂದಿ ಬೈಕ್​ ಸವಾರರಿಗೆ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ಬೈಕ್​ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸುತ್ತಿಲ್ಲ. ಸಣ್ಣ&ಪುಟ್ಟ ಅಪಘಾತವಾದಲ್ಲಿ ತಲೆಗೆ ಪೆಟ್ಟು ಬಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ರಾಕವಚ ಧರಿಸಬೇಕು. ರ್ನಿಲಕ್ಷ$್ಯ ಮಾಡಬಾರದು ಎಂದು ಮನವಿ ಮಾಡಿದರು. ಗವಿಮಠ, ಅಶೋಕ ವೃತ್ತ, ಜವಾಹರ ರಸ್ತೆ, ಬಸ್​ ನಿಲ್ದಾಣ ಮುಂಭಾಗ, ಲಾಲ ಬಹಾದ್ದೂರ ಶಾಸ್ತ್ರಿ ವೃತ್ತ, ಬಸವೇಶ್ವರ ವೃತ್ತ ಸೇರಿ ಪ್ರಮುಖ ಕಡೆಗಳಲ್ಲಿ ಅರಿವು ಮೂಡಿಸಲಾಯಿತು.
ಆಗಸ್ಟ್​ 1ರಿಂದ ಕೊಪ್ಪಳದಲ್ಲೂ ಹೆಲ್ಮೆಟ್​ ಧರಿಸುವಿಕೆ ಕಡ್ಡಾಯಗೊಳ್ಳಲಿದೆ. ಪ್ರಮುಖ ಕಡೆಗಳಲ್ಲಿ ಜಾಗೃತಿ ಲಕ, ಬ್ಯಾನರ್​ ಅಳವಡಿಸಲಾಗುತ್ತಿದೆ. ಪಿಎಸ್​ಐ ವೆಂಕಟೇಶ, ಶಬಾನ ಬಾನು ಸೇರಿ ಸಂಚಾರ ಠಾಣೆ ಸಿಬ್ಬಂದಿ ನಗರಾದ್ಯಂತ ಜಾಗೃತಿ ಕೈಗೊಂಡರು. ಜುಲೈ ಅಂತ್ಯದವರೆಗೂ ಅರಿವು ಕಾರ್ಯಕ್ರಮ ನಡೆಯಲಿದ್ದು ಆ.1ರಿಂದ ಧರಿಸದವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಮೂಲಕ ಎಚ್ಚರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net