ಬಡವರಿಗೆ ಆರೋಗ್ಯ ಶಿಬಿರ ಅನುಕೂಲ

ಹನುಮಸಾಗರದ ಶಾದಿಮಹಲ್‌ನಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಉದ್ಘಾಟಿಸಿದರು. ಪ್ರಮುಖರಾದ ಗೇಸುದರಾಜ್ ಮೂಲಿಮನಿ, ಡಾ. ನಜೀರಸಾಬ್ ಮೆಣೇಧಾಳ, ಸಂಗಯ್ಯ ವಸ್ತ್ರದ, ಬಸವರಾಜ ಹಳ್ಳೂರು, ಸೂಚಪ್ಪ ದೇವರಮನಿ, ಮಂಜುನಾಥ ಹುಲ್ಲೂರು, ರಾಜೇಸಾಬ್ ಕುಷ್ಟಗಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಅಮರೇಗೌಡ ಬಯ್ಯಪುರ ಹೇಳಿಕೆ
  • ಹನುಮಸಾಗರ ಆರೋಗ್ಯ ತಪಾಸಣೆ ಉಚಿತ ಶಿಬಿರ
ಹನುಮಸಾಗರ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು. ಶಾದಿಮಹಲ್‌ನಲ್ಲಿ ಸೀರತ್ ಅಭಿಯಾನದ ನಿಮಿತ್ತ ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ಪಡೆಯಬೇಕು. ಒತ್ತಡದ ಜೀವನಶೈಲಿ ಹಾಗೂ ಆಧುನಿಕ ಆಹಾರ ಪದ್ಧತಿಯಿಂದಾಗಿ ಮನುಷ್ಯ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಅನೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಆರ್ಥಿಕ ಸಮಸ್ಯೆಯಿಂದಾಗಿ ಸರಿಯಾಗಿ ಚಿಕಿತ್ಸೆ ಪಡೆದುಕೊಳಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಉಚಿತ ಶಿಬಿರಗಳು ಅನುಕೂಲವಾಗಲಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕ ಅಧ್ಯಕ್ಷ ಗೇಸುದರಾಜ್ ಮೂಲಿಮನಿ, ತಂಜೀಮ್ ಇಸ್ಲಾಂ ಕಮಿಟಿ ಸ್ಥಳೀಯ ಅಧ್ಯಕ್ಷ ಡಾ. ನಜೀರಸಾಬ್ ಮೆಣೇಧಾಳ, ಮುಖಂಡರಾದ ಖಾಜಾಹುಸೇನ್ ಹುಲಿಹೈದರ್, ಖಲೀಲ್ ಅಹ್ಮದ್ ಚೌಧರಿ, ಜಹಾಂಗೀರ ಚಳಗೇರಿ, ಅಬ್ದುಲ್ ರಜಾಕ್ ಚಳಗೇರಿ, ಖಾಜಾಹುಸೇನ್ ಡಲಾಯತ, ಮೆಹಬೂಬ್ ಮೆಣೇಧಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net