ಸಲೂನ್‌ಗಳಲ್ಲಿ ಸ್ವಚ್ಛತೆ ಆದ್ಯತೆಯಾಗಲಿ

ಗಂಗಾವತಿ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್, ಕ್ಷಯರೋಗ ನಿರ್ಮೂಲನೆ ವಿಭಾಗ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ್‌ರನ್ನು ಲಯನ್ಸ್ ಕ್ಲಬ್‌ನಿಂದ ಬುಧವಾರ ಸನ್ಮಾನಿಸಲಾಯಿತು. ಹಿರಿಯ ವೈದ್ಯರಾದ ಜಿ.ಚಂದ್ರಪ್ಪ, ಡಾ.ಎ. ಸೋಮರಾಜು ಇತರರಿದ್ದರು.
ಗಂಗಾವತಿ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್, ಕ್ಷಯರೋಗ ನಿರ್ಮೂಲನೆ ವಿಭಾಗ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ್‌ರನ್ನು ಲಯನ್ಸ್ ಕ್ಲಬ್‌ನಿಂದ ಬುಧವಾರ ಸನ್ಮಾನಿಸಲಾಯಿತು. ಹಿರಿಯ ವೈದ್ಯರಾದ ಜಿ.ಚಂದ್ರಪ್ಪ, ಡಾ.ಎ. ಸೋಮರಾಜು ಇತರರಿದ್ದರು.
Published on
ಗಂಗಾವತಿ: ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಕ್ಷೌರಿಕ ವೃತ್ತಿಯ ಸಂಘದವರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ ಲಯನ್ಸ್ ಕ್ಲಬ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಚ್‌ಐವಿ, ಏಡ್ಸ್, ಕ್ಷಯ ರೋಗ ನಿರ್ಮೂಲನೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು.
ಐಸಿಟಿಸಿ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್ ಮಾತನಾಡಿ, ಸೋಂಕಿನ ಆರಂಭಿಕ ಹಂತದಲ್ಲಿ ಕಂಡುಬರುವ ಆರೋಗ್ಯ ಬದಲಾವಣೆ ಬಗ್ಗೆ ಜಾಗೃತರಾಗಬೇಕಿದ್ದು, ಮುನ್ನೆಚ್ಚರಿಕೆ ಕ್ರಮದೊಂದಿಗೆ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಸೋಂಕಿರುವ ವ್ಯಕ್ತಿಯೊಂದಿಗೆ ಮಾನವೀಯತೆ ಮತ್ತು ಗೌರವದಿಂದ ನಡೆದುಕೊಳ್ಳುವಂತೆ ಸಲಹೆ ನೀಡಿದರು.
ಕ್ಷಯರೋಗ ನಿರ್ಮೂಲನೆ ವಿಭಾಗದ ಮೇಲ್ವಿಚಾರಕ ಎಚ್. ಮಲ್ಲಿಕಾರ್ಜುನ ಮಾತನಾಡಿ, ಕ್ಷೌರಿಕ ವೃತ್ತಿಯ ಸಲೂನ್‌ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕಿದ್ದು, ಉತ್ತಮ ಗಾಳಿ ಸಂಚಾರ, ಆರೋಗ್ಯಕರ ವಾತಾವರಣ ಕಲ್ಪಿಸಬೇಕು. ಉಪಕರಣಗಳನ್ನು ಸ್ವಚ್ಛವಾಗಿ ಹಾಗೂ ಸೋಂಕು ಮುಕ್ತವಾಗಿ ಬಳಸುವಂತೆ ಒತ್ತಾಯಿಸಿದರು.
ಆರೋಗ್ಯ ಸಂದರ್ಶನ ರಾಜೀವ್, ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ. ದೇವರಾಜ್ ಚಂದ್ರಪ್ಪ, ಹಿರಿಯ ವೈದ್ಯರಾದ ಜಿ. ಚಂದ್ರಪ್ಪ, ಡಾ.ಎ. ಸೋಮರಾಜು, ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಇ.ಮಾರೇಶ ಸೇರಿ ಕ್ಲಬ್ ಪದಾಧಿಕಾರಿಗಳಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ ನಿಮಿತ್ತ ಉಚಿತ ಲಸಿಕೆ ಹಾಕಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net