ಎಚ್​ಡಿಕೆ ಸಿಎಂ ಆಗಬೇಕು ಎಂಬುದು ಕಾರ್ಯಕರ್ತರ ಆಶಯ

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಜೆಡಿಎಸ್​ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಜೆಡಿಎಸ್​ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ, ಪ್ರಮುಖರಾದ ಶೇಖರಗೌಡ ಪಾಟೀಲ್​, ವಿರೂಪಾಕ್ಷಗೌಡ ಗುಡಗೇರಿ, ರವಿಕುಮಾರ ಗುಡಗೇರಿ, ಗಿರೀಶ ಕುಮಾರ, ಸುರೇಶ ಗುಡಗೇರಿ, ಪಂಪಾಪತಿ ಗುಡಗೇರಿ, ಬಸವರಾಜ ಮುರ್ಲಾಪುರ ಇದ್ದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಜೆಡಿಎಸ್​ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಜೆಡಿಎಸ್​ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ, ಪ್ರಮುಖರಾದ ಶೇಖರಗೌಡ ಪಾಟೀಲ್​, ವಿರೂಪಾಕ್ಷಗೌಡ ಗುಡಗೇರಿ, ರವಿಕುಮಾರ ಗುಡಗೇರಿ, ಗಿರೀಶ ಕುಮಾರ, ಸುರೇಶ ಗುಡಗೇರಿ, ಪಂಪಾಪತಿ ಗುಡಗೇರಿ, ಬಸವರಾಜ ಮುರ್ಲಾಪುರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೀರೇಶಗೌಡ್ರು ದಳಪತಿ

ಕೊಪ್ಪಳ : ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ಸಿಎಂ ಆಗಬೇಕು ಎಂಬುದು ಪಕ್ಷದ ಕಾರ್ಯಕರ್ತರ ಆಶಯವಾಗಿದೆ ಎಂದು ಜೆಡಿಎಸ್​ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ ಹೇಳಿದರು.

ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಗುಡಗೇರಿ, ಘಟ್ಟಿರಡ್ಡಿಹಾಳ, ಮುರ್ಲಾಪುರ ಹಾಗೂ ಬೆಳಗಟ್ಟಿ ಗ್ರಾಮಗಳಲ್ಲಿ ನಡೆದ ಜೆಡಿಎಸ್​ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್​ ಸಂಘಟನೆ ಬಲಿಷ್ಠಗೊಂಡಿದ್ದು, ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್​ ನಾಯಕತ್ವಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ-&ಜೆಡಿಎಸ್​ ಮೈತ್ರಿ ಮುಂದಿನ ಚುನಾವಣೆಯಲ್ಲೂ ಮುಂದುವರಿಯಲಿದ್ದು, ಕೊಪ್ಪಳ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿಯ ಗೆಲುವಿಗೆ ಅನುಕೂಲಕರ ವಾತಾವರಣ ನಿಮಾರ್ಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿ.ವಿ.ಸಿ ನೇತೃತ್ವದಲ್ಲಿ ರೈತರ ಹಾಗೂ ಜನಪರ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹಾಗೂ ಹಿರಿಯ ಮುಖಂಡರು ಶೀಘ್ರದಲ್ಲೇ ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ. ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ರಾಜ್ಯದಲ್ಲೇ ಕೊಪ್ಪಳ ಜಿಲ್ಲೆ ಮುಂಚೂಣಿಯಲ್ಲಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಬೇಕು ಎಂದು ಹೇಳಿದರು.
ಜೆಡಿಎಸ್​ ಪಕ್ಷದ ಪ್ರಮುಖರಾದ ಶೇಖರಗೌಡ ಪಾಟೀಲ್​, ವಿರೂಪಾಕ್ಷಗೌಡ ಗುಡಗೇರಿ, ರವಿಕುಮಾರ ಗುಡಗೇರಿ, ಗಿರೀಶ ಕುಮಾರ, ಸುರೇಶ ಗುಡಗೇರಿ, ಪಂಪಾಪತಿ ಗುಡಗೇರಿ, ಬಸವರಾಜ ಮುರ್ಲಾಪುರ, ಸಚಿನ್​ ಡಂಬಳ, ಬಸವರಾಜ ಘಟ್ಟಿರಡ್ಡಿಹಾಳ, ರಮೇಶ ಘಟ್ಟಿರಡ್ಡಿಹಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net