ಎಚ್ಡಿಕೆಯಿಂದ ಎಸ್​ಐಆರ್​ ದುರುಪಯೋಗ

ಶಾಸಕ ಬಸವರಾಜ ರಾಯರಡ್ಡಿ
ಶಾಸಕ ಬಸವರಾಜ ರಾಯರಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ರಾಯರಡ್ಡಿ ಆರೋಪ
ಕೊಪ್ಪಳ : ರಾಮನಗರದಲ್ಲಿ ಶಾದಿಮಹಲ್​ನಲ್ಲಿ ಜನರನ್ನು ಸೇರಿಸಿ ಎಸ್​ಐಆರ್​ ಪ್ರಕ್ರಿಯೆ ನಡೆಸಿರುವುದಕ್ಕು ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡಿಸಿಸಬೇಕೆಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೇ ಕಡೆ ಜನರನ್ನು ಸೇರಿಸಿ ಎನ್ಯೂಮುರೇಷನ್​ ಫಾರ್ಮ್ ಭರ್ತಿ ಮಾಡಿದ್ದಾರೆ. ಆ ವಿಡಿಯೋವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಅವರದೇ ಕ್ಷೇತ್ರ. ಅವರ ಜನರೇ ಅಲ್ಲಿರುವುದು. ಅವರೇ ಬೇಕೆಂದು ಈ ರೀತಿ ಮಾಡಿಸಿರಬಹುದು. ಎಸ್​ಐಆರ್​ಗೂ ರಾಜ್ಯ ಸರ್ಕಾರಕ್ಕೂ ಯಾವ ಸಂಬಂಧವಿಲ್ಲ. ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿದೆ ಎಂದು ಸಮರ್ಥಿಸಿಕೊಂಡರು.
ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಕೊಟ್ಟರೆ ಯಾರೂ ಬೇಡ ಅನ್ನುವುದಿಲ್ಲ. ಕೊಟ್ಟರೆ ಜನ ಸೇವೆ ಮಾಡಲು ಅವಕಾಶ ಸಿಗಲಿದೆ. ಕೊಡದಿದ್ದರೆ ಏನೂ ನಷ್ಟವಿಲ್ಲ. ನಾನಾಗಿಯೇ ಮಂತ್ರಿ ಸ್ಥಾನ ಕೇಳಿಲ್ಲ. ಮಂತ್ರಿ ಆಗದಿದ್ದರೆ ಯಾರೂ ಸಾಯುವುದಿಲ್ಲ. ಸಂಪುಟ ವಿಸ್ತರಣೆ ವಿಷಯ ಸಿಎಂ ವಿವೇಚನೆಗೆ ಬಿಟ್ಟದ್ದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net