ದೇಶಕ್ಕೆ ‘ಹಂಪಿ’ ಕೊಡುಗೆ ಅಪಾರ

ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ವಿವಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ದೇವರಾಯ ನಾಟಕ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಗೋಟೂರು, ಪ್ರೊ.ಭೋಜರಾಜ ಎಸ್., ಉಪನ್ಯಾಸಕ ಮಹಾಂತೇಶ್ ಗವಾರಿ ಇತರರಿದ್ದರು.
ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ವಿವಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ದೇವರಾಯ ನಾಟಕ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಗೋಟೂರು, ಪ್ರೊ.ಭೋಜರಾಜ ಎಸ್., ಉಪನ್ಯಾಸಕ ಮಹಾಂತೇಶ್ ಗವಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯೆ ವಿದ್ಯಾವತಿ ಗೋಟೂರು ಅನಿಸಿಕೆ
  • ಶ್ರೀಕೃಷ್ಣ ದೇವರಾಯ ನಾಟಕ ಪ್ರದರ್ಶನಕ್ಕೆ ಚಾಲನೆ
ಕುಷ್ಟಗಿ: ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣ ದೇವರಾಯರ ಕೊಡುಗೆ ಅಮೂಲ್ಯವಾಗಿದ್ದು, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ವಿದ್ಯಾವತಿ ಗೋಟೂರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ವಿವಿ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ದೇವರಾಯ ನಾಟಕ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಇತಿಹಾಸ ಪುಟದಲ್ಲಿ ಅಜರಾಮರವಾಗಿ ಹೊರ ಹೊಮ್ಮಿರುವ ವಿಜಯನಗರ ಸಾಮ್ರಾಜ್ಯದ ಚರಿತ್ರೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಶ್ರೀಕೃಷ್ಣದೇವರಾಯ ಆಡಳಿತ, ನಾಡಪ್ರೇಮ ಸೇರಿದಂತೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಅವರ ನಾಟಕ ಪ್ರದರ್ಶನ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಹಂಪಿ ದೇಶಕ್ಕೆ ಆಡಳಿತ, ಕಲೆ, ವಾಸ್ತುಶಿಲ್ಪದಂತಹ ಮಹತ್ವದ ಕೊಡುಗೆ ನೀಡಿದೆ. ಕಾಲೇಜು ದಿನಗಳಲ್ಲಿ ರಂಗಭೂಮಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿರುವುದು ಅತ್ಯುತ್ತಮ ಕಾರ್ಯ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ಎನ್‌ಎಸ್‌ಎಸ್ ಸಂಯೋಜಕ ಪ್ರೊ.ಭೋಜರಾಜ ಎಸ್., ದುರಗೇಶ್, ಮಹಾಂತೇಶ್, ಶಂಕರ್, ಸುರೇಶ, ವೀಣಾ, ರತ್ನಾ, ಸಕ್ಕುಬಾಯಿ ಕಬಾಡಿ, ಪ್ರಶಾಂತ, ಶಿವಕುಮಾರ್, ಸೋಮಶೇಖರ್, ಶಿವರಾಜ್ ಕೋಳೂರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net