ಹಂಪಿ ಪ್ರಾಧಿಕಾರ ವ್ಯಾಪ್ತಿಯಿಂದ ಗ್ರಾಮ ಕೈ ಬಿಡಿ

ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಗಂಗಾವತಿ ತಾಲೂಕಿನ 15 ಗ್ರಾಮಗಳನ್ನು ಕೈ ಬಿಡುವಂತೆ ಒತ್ತಾಯಸಿ ನಿವಾಸಿಗಳು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಲಲಿತಾರಾಣಿ ಶ್ರೀರಂಗದೇವರಾಯಲು, ರಾಜಾ ಕೃಷ್ಣದೇವರಾಯ, ರತ್ನಶ್ರೀ ಕೃಷ್ಣದೇವರಾಯ, ಮಲ್ಲಿಕಾರ್ಜುನ ಹಿರೇಮಠ, ಪ್ರಶಾಂತ, ವೆಂಕಟೇಶ ಬಾಬು, ಸಾಯಿಕುಮಾರ ಇದ್ದರು.
ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಗಂಗಾವತಿ ತಾಲೂಕಿನ 15 ಗ್ರಾಮಗಳನ್ನು ಕೈ ಬಿಡುವಂತೆ ಒತ್ತಾಯಸಿ ನಿವಾಸಿಗಳು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಲಲಿತಾರಾಣಿ ಶ್ರೀರಂಗದೇವರಾಯಲು, ರಾಜಾ ಕೃಷ್ಣದೇವರಾಯ, ರತ್ನಶ್ರೀ ಕೃಷ್ಣದೇವರಾಯ, ಮಲ್ಲಿಕಾರ್ಜುನ ಹಿರೇಮಠ, ಪ್ರಶಾಂತ, ವೆಂಕಟೇಶ ಬಾಬು, ಸಾಯಿಕುಮಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರದಿಂದ ಕೊಡಿ ಮುಕ್ತಿ
  • ನಿವಾಸಿಗಳಿಂದ ಪ್ರತಿಭಟನೆ
ಕೊಪ್ಪಳ : ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಗಂಗಾವತಿ ತಾಲೂಕಿನ 15 ಗ್ರಾಮಗಳನ್ನು ಕೈ ಬಿಡುವಂತೆ ಒತ್ತಾಯಸಿ ನಿವಾಸಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವ ಪಾರಂಪರಿಕ ತಾಣ ಹಂಪಿ ರಕ್ಷಣೆಗೆ ಸರ್ಕಾರ ಪ್ರಾಧಿಕಾರ ರಚಿಸಿದೆ. ಗಂಗಾವತಿ ತಾಲೂಕಿನ 15 ಗ್ರಾಮಗಳು ಇದಕ್ಕೆ ಒಳಪಡಲಿವೆ. ಆದರೆ, ಕಠಿಣ ನಿಯಮದಿಂದ ಗ್ರಾಮಸ್ಥರು ನಾನಾ ಸಮಸ್ಯೆ ಅನುಭವಿಸುತ್ತಿದ್ದೇವೆ. ಆಸ್ತಿ ಹಕ್ಕುಪತ್ರ, ಹೊಸ ನಿವೇಶನ, ಬಹುಮಹಡಿ ಕಟ್ಟಡ, ವಿದ್ಯುತ್​ ಸಂಪರ್ಕ, ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಎಲ್ಲದಕ್ಕೂ ಕಠಿಣ ನಿಯಮ ಮಾಡಿದ್ದು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸಣ್ಣ ಪರವಾನಗಿ ಪಡೆಯಲೂ ಹೆಣಗಾಡಬೇಕಾಗಿದೆ. ನಮಗೆಲ್ಲ ಭವಿಷ್ಯ ಇಲ್ಲದಂತಾಗಿದೆ. ಹತ್ತಾರು ಬಾರಿ ಮನವಿ ಸಲ್ಲಿಸಿ, ಹೋರಾಟ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
15 ಗ್ರಾಮಗಳನ್ನು ಪ್ರಾಧಿಕಾರ ವ್ಯಾಪ್ತಿಯಿಂದ ಕೈಬಿಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ನೀಡಬೇಕು. ಅಧಿಕಾರಿಗಳಿಂದ ಸಾಕಷ್ಟು ತೊಂದರೆ ಆಗುತ್ತಿದ್ದು ಅದನ್ನು ಸರಿಪಡಿಸಬೇಕು. ನಮ್ಮ ಆಸ್ತಿಗಳನ್ನು ನಮ್ಮ ಹೆಸರಿಗೆ ಮಾಡಿ ಹಕ್ಕುಪತ್ರ ನೀಡಬೇಕು. ಹೊಸದಾಗಿ ಆಸ್ತಿ ಖರೀದಿ, ನೋಂದಣಿ, ನಿವೇಶನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಹಂಪಿ ಪ್ರದೇಶಕ್ಕೆ ಪ್ರಾಧಿಕಾರ ವ್ಯಾಪ್ತಿ ಸೀಮಿತಗೊಳಿಸಬೇಕು. ಸ್ಥಳಿಯ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು. ತೂಗು ಸೇತುವೆ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನಕಾರರಾದ ಲಲಿತಾರಾಣಿ ಶ್ರೀರಂಗದೇವರಾಯಲು, ರಾಜಾ ಕೃಷ್ಣದೇವರಾಯ, ರತ್ನಶ್ರೀ ಕೃಷ್ಣದೇವರಾಯ, ಮಲ್ಲಿಕಾರ್ಜುನ ಹಿರೇಮಠ, ಪ್ರಶಾಂತ, ವೆಂಕಟೇಶ ಬಾಬು, ಸಾಯಿಕುಮಾರ, ಶ್ರೀನಾಥ, ಹರ್ಷವರ್ದನ, ಸಂಜಯ್​ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net