ಹಡಪದ ಅಪ್ಪಣ್ಣನವರ ಅರಿವಿನ ಗವಿ ವಿವಾದ

ಬೀದರ್​ನಲ್ಲಿ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಯಲ್ಲಿ ಅಕ್ರಮವಾಗಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ ಸಮುದಾಯದಿಂದ ಕೊಪ್ಪಳದಲ್ಲಿ ಮಂಗಳವಾರ ನಗರದ ಗದಗ ರಸ್ತೆಯ ಗೌರಿಶಂಕರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಪ್ರಮೂಖರಾದ ಮಂಜಣ್ಣ ಅಂದ್ರಾಳ, ಮುತ್ತಣ್ಣ ಮಾದಿನೂರು, ಬಸವರಾಜ ಇಟಗಿ, ನಾಗರಾಜ ನೇರಗಲ್​, ಮಂಜುನಾಥ ಬೇಳೂರು, ಶರಣಪ್ಪ ಇಟಗಿ, ಚಂದ್ರು ಬೆಣಕಲ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಡಪದ ಸಮುದಾಯದಿಂದ ಪ್ರತಿಭಟನೆ
ಕೊಪ್ಪಳ : ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಶಿವಶರಣ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಯಲ್ಲಿ ಅಕ್ರಮವಾಗಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ ಹಡಪದ ಸಮುದಾಯ ಮಂಗಳವಾರ ನಗರದ ಗದಗ ರಸ್ತೆಯ ಗೌರಿಶಂಕರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಸಮೀಪವಿರುವ ಹಡಪದ ಅಪ್ಪಣ್ಣನವರ ಗವಿಯಲ್ಲಿ ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಪ್ಪಣ್ಣನವರ ಇತಿಹಾಸದ ಕುರುಹುಗಳನ್ನು ಅಳಿಸಿ, ಅನ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಸ್ಥಾಪಿಸಿದ ಮೂರ್ತಿಗಳನ್ನು ತೇರವು ಮಾಡಿ, ಯಥಾಸ್ಥಿತಿ ಕಾಪಾಡಬೇಕು. ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪುನ@ ಪ್ರತಿಷ್ಠಾಪಿಸಿ. ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿಪಡಿಸಬೇಕು. ಇತಿಹಾಸ ತಿರುಚಿದ ಪಂಚಕಮಿಟಿ ಮತ್ತು ರ್ನಿಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಐತಿಹಾಸಿಕ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಮೂಖರಾದ ಮಂಜಣ್ಣ ಅಂದ್ರಾಳ, ಮುತ್ತಣ್ಣ ಮಾದಿನೂರು, ಬಸವರಾಜ ಇಟಗಿ, ನಾಗರಾಜ ನೇರಗಲ್​, ಮಂಜುನಾಥ ಬೇಳೂರು, ಶರಣಪ್ಪ ಇಟಗಿ, ಚಂದ್ರು ಬೆಣಕಲ್​, ಪಕೀರೇಶ ಬೊಚನಳ್ಳಿ, ನಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net