ಕುಷ್ಟಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ನಿಜಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಗ್ರೇಡ್​&2ತಹಸೀಲ್ದಾರ್​ ರಜನಿಕಾಂತ್​ ಕೆಂಗೇರಿ, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್​, ಮುಖಂಡರಾದ ರಾಮನಗೌಡ ಪಾಟೀಲ, ರುದ್ರಪ್ಪ ಹಡಪದ ಇದ್ದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ನಿಜಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಗ್ರೇಡ್​&2ತಹಸೀಲ್ದಾರ್​ ರಜನಿಕಾಂತ್​ ಕೆಂಗೇರಿ, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್​, ಮುಖಂಡರಾದ ರಾಮನಗೌಡ ಪಾಟೀಲ, ರುದ್ರಪ್ಪ ಹಡಪದ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪಣ್ಣ ಸಿದ್ಧಾಂತ ಅನುಷ್ಠಾನ ಅವಶ್ಯ
ಕೊಪ್ಪಳ: ನಿಜಶರಣ ಹಡಪದ ಅಪ್ಪಣ್ಣ ಅವರ ವಚನಗಳ ಸಾರ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ಕುಷ್ಟಗಿ ಗ್ರೇಡ್​&2 ತಹಸೀಲ್ದಾರ್​ ರಜನಿಕಾಂತ್​ ಕೆಂಗೇರಿ ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ತಾಲೂಕಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದರು.
ವಚನಗಳ ಮೂಲಕ ಜೀವನ ಸಾರ ಸಾರಿದರು. ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯ, ಸಿದ್ಧಾಂತಗಳನ್ನು ನೀಡಿದ್ದಾರೆ. ಅವೆಲ್ಲವನ್ನು ಪಾಲಿಸಬೇಕಿದೆ. ಈ ಮೂಲಕ ಜೀವನಕ್ಕೊಂದು ಅರ್ಥ ಪಡೆಯೋಣ ಎಂದರು.
ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್​ ಮಾತನಾಡಿ, ಹಡಪದ ಅಪ್ಪಣ್ಣ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಬಸವಣ್ಣನವರ ಆಪ್ತ ಸಹಚರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ಮೌಲ್ಯಗಳನ್ನು ಬಿತ್ತಿದರು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಟಿ.ಬಸವರಾಜ ಮಾತನಾಡಿ, 12ನೇ ಶತಮಾನದ ಶರಣರು ಸಾಮಾಜಿಕ ಸಮಾನತೆಗಾಗಿ ಅನೇಕ ವಚನಗಳನ್ನು ರಚಿಸಿದ್ದಾರೆ. ಅವರಲ್ಲಿ ಅಪ್ಪಣ್ಣ ಪ್ರಮುಖರು. ತಮ್ಮ ವಚನಗಳ ಮೂಲಕ ಜೀವನ ಸಾರ ಸಾರಿದ್ದಾರೆಂದರು.
ಸಂಶೋಧಕ ಡಾ.ನಾಗರಾಜ್​ ವಿಶೇಷ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ಸಾಧಕರಾದ ಸಂಗಮೇಶ ಮುಶಿಗೇರಿ, ಮಹೇಶ ಹಡಪದ ಅವರನ್ನು ಸನ್ಮಾನಿಸಲಾಯಿತು. ಸಮುದಾಯ ಮುಖಂಡರಾದ ರಾಮನಗೌಡ ಪಾಟೀಲ, ರುದ್ರಪ್ಪ ಹಡಪದ, ಶಿವಪುತ್ರಪ್ಪ ಹಡಪದ, ದೊಡ್ಡಪ್ಪ ಹಡಪದ, ಮುಕೇಶ್​ ನಿಲೋಗಲ್​, ಮಹಾಂತೇಶ್​ ಹಡಪದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net