ಕೊಪ್ಪಳದಲ್ಲಿ ಹಡಪದ ಅಪ್ಪಣ್ಣ ಜಯಂತಿ

ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಶ್ರೀ ಶಿವಶಾಂತವೀರ ಸ್ವಾಮೀಜಿ, ಸಾವಿತ್ರಿ ಮುಜುಂದಾರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್​, ಸಮುದಾಯ ಪ್ರಮುಖರಾದ ಮಂಜುನಾಥ ಹಂದ್ರಾಳ, ಮೌನೇಶ ಹಡಪದ ಇದ್ದರು.
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಶ್ರೀ ಶಿವಶಾಂತವೀರ ಸ್ವಾಮೀಜಿ, ಸಾವಿತ್ರಿ ಮುಜುಂದಾರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್​, ಸಮುದಾಯ ಪ್ರಮುಖರಾದ ಮಂಜುನಾಥ ಹಂದ್ರಾಳ, ಮೌನೇಶ ಹಡಪದ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಚನ ಪಾಲನೆಯಿಂದ ಜೀವನ ಸಾರ್ಥಕ
  • ವಿಪ ಸದಸ್ಯೆ ಹೇಮಲತಾ ನಾಯಕ ಅಭಿಮತ
ಕೊಪ್ಪಳ: ಶರಣರು ರಚಿಸಿದ ವಚನಗಳ ಸಾರ ಜೀವನದಲ್ಲಿ ಅಳಡಿವಡಿಸಿಕೊಂಡು ಪಾಲಿಸಿದಲ್ಲಿ ಸಾರ್ಥಕತೆ ದೊರೆಯಲಿದೆ ಎಂದು ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದರು.
ಶಿವಶರಣ ಹಡಪದ ಅಪ್ಪಣ್ಣ ಅವರು ಬಸವೇಶ್ವರರ ಆಪ್ತ ಕಾರ್ಯದರ್ಶಿಯಾಗಿದ್ದರು. ಕರ್ತವ್ಯನಿಷ್ಠೆಗೆ ಹೆಸರಾದವರು. ಲಿಂಗ, ಜಾತಿ ತಾರತಮ್ಯವಿಲ್ಲದೆ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಕಾಯಕ ಜೀವಿ. 242ಕ್ಕೂ ಹೆಚ್ಚು ವಚನ ರಚಿಸಿದ್ದಾರೆ. ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಅಪ್ಪಣ್ಣ ಅವರ ಸಾಂಸತಿಕ ಹಾಗೂ ಆಧ್ಯಾತ್ಮಿಕ ಕೊಡುಗೆ ಅಪಾರ ಎಂದರು.
ಬಿಸರಳ್ಳಿ ಗವಿಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಶರಣ ಅಪ್ಪಣ್ಣ ಅವರ ವಚನ ಬೆಳಕು ಎಂದಿಗೂ ಆರದು. ಸಾಮಾನ್ಯರ ಜಯಂತಿಗೂ ಶರಣರ ಜಯಂತಿಗೂ ಬಹಳ ವ್ಯತ್ಯಾಸವಿದೆ. ಇಂದು ಹಚ್ಚಿದ ದೀಪ ಆರಿಸಿ ಜನ್ಮ ದಿನ ಆಚರಿಸಲಾಗುತ್ತದೆ. ಹಡಪದ ಅಪ್ಪಣ್ಣ ಸಮಾಜದಲ್ಲಿ ಆರದ ವಚನಗಳ ಜ್ಯೋತಿ ಹಚ್ಚಿದ್ದಾರೆ. ಮಾನವ ತಲೆಯೊಳಗಿನ ಅಹಂಕಾರ, ಕ್ಲೇಷ, ವಿಕಾರಗಳನ್ನು ಕಳೆವ ಕಾರ್ಯ ಮಾಡಿದರೆಂದು ಬಣ್ಣಿಸಿದರು.
ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಂದಾರ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕು ಮುನ್ನಾ ನಗರದಲ್ಲಿ ಅಪ್ಪಣ್ಣ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಡಾ.ಮಹಾಂತೇಶ ಮಲ್ಲನಗೌಡರ, ಬಸವರಾಜ ಬಳ್ಳೊಳ್ಳಿ, ಎ.ವಿ.ಕಣವಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್​, ಸಮುದಾಯ ಪ್ರಮುಖರಾದ ಮಂಜುನಾಥ ಹಂದ್ರಾಳ, ಮೌನೇಶ ಹಡಪದ, ಮಲ್ಲಿಕಾರ್ಜುನ್​ ಮಿಟ್ಟಿಕೇರಿ, ವಿ.ಬಿ.ಎಸ್​.ವೀರಾಪುರ್​, ಮುತ್ತು ಹುಬ್ಬಳ್ಳಿ, ಹನುಮಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net