ಸಂಗೀತದಿಂದ ಮನಸ್ಸು ಗೆದ್ದ ಗುರು-ಶಿಷ್ಯರು

ಯಲಬುರ್ಗಾ ಮುಧೋಳ ರಸ್ತೆಯ ಶ್ರೀ ಸಿದ್ಧರಾಮೇಶ್ವರ ಕಾಲನಿಯಲ್ಲಿ ಪಂ.ಪುಟ್ಟರಾಜ ಗವಾಯಿಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದೊಡ್ಡಯ್ಯ ಗುರುವಿನ, ಪ್ರಮುಖರಾದ ಕಳಕಪ್ಪ ತಳವಾರ, ಅಶೋಕ ಮಾಲಿಪಾಟೀಲ್, ಸುರೇಶ ನಡಲುಮನಿ, ಶರಣಪ್ಪ ಹಡಪದ, ಈರಪ್ಪ ಕಲಕಬಂಡಿ, ಹನಮಂತಪ್ಪ ವಾಲ್ಮೀಕಿ, ಶರಣಮ್ಮ ಪೂಜಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೇಷ್ಠ
  • ಮಾನವತಾವಾದಿ
  • ಪಂ.ಪುಟ್ಟರಾಜ ಗವಾಯಿ
ಯಲಬುರ್ಗಾ: ದೇಶ ಕಂಡ ಶ್ರೇಷ್ಠ ಮಾನವತಾವಾದಿ ಪಂ.ಪುಟ್ಟರಾಜ ಗವಾಯಿ ಅವರು ಸರ್ವಕಾಲಕ್ಕೂ ಸ್ಮರಣೀಯರು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದೊಡ್ಡಯ್ಯ ಗುರುವಿನ ಹೇಳಿದರು.
ಪಟ್ಟಣದ ಮುಧೋಳ ರಸ್ತೆಯ ಶ್ರೀ ಸಿದ್ಧರಾಮೇಶ್ವರ ಕಾಲನಿಯಲ್ಲಿ ಸೋಮವಾರ ಪಂ.ಪುಟ್ಟರಾಜ ಗವಾಯಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಸಂಗೀತ ಮತ್ತು ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಪುಟ್ಟಯ್ಯ ಅವರು 8 ವರ್ಷದ ಬಾಲಕನಿರುವಾಗ ಪಾಲಕರು ಪಂಡಿತ ಪಂಚಾಕ್ಷರಿ ಮಡಿಲಿಗೆ ಒಪ್ಪಿಸಿದರು. ಅಂಧರಾಗಿದ್ದರೂ ಗುರು, ಶಿಷ್ಯರು ಸಂಗೀತದ ಮೂಲಕ ಜನರನ್ನು ಗೆದ್ದರು ಎಂದರು. ಪ್ರಮುಖರಾದ ಸಿದ್ದಪ್ಪ ಮೇಟಿ, ಬಸವರಾಜ, ಪರಸಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net