ವರುಣದೇವನ ಕೃಪೆಗಾಗಿ ಗುರ್ಜಿ ಪೂಜೆ

ಬೋಚನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ನಡೆಸಲಾಯಿತು.
ಬೋಚನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬೋಚನಹಳ್ಳಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
  • ಸಾಂಪ್ರದಾಯಿಕ ಆಚರಣೆಗೆ ಗ್ರಾಮಸ್ಥರ ಮೊರೆ
ಅಳವಂಡಿ: ಮುಂಗಾರು ಮಳೆಯ ವಿಳಂಬದಿಂದ ಕಂಗಾಲಾಗಿರುವ ಬೋಚನಹಳ್ಳಿ ಗ್ರಾಮಸ್ಥರು ವರುಣದೇವನ ಕೃಪೆಗಾಗಿ ಪ್ರಾರ್ಥಿಸಿ ಗ್ರಾಮದಲ್ಲಿ ಸಾಂಪ್ರದಾಯಿಕ ಗುರ್ಜಿ ಸೇವೆಯನ್ನು ಶುಕ್ರವಾರ ನೆರವೇರಿಸಿದರು.
ಪ್ರಮುಖ ಬೀದಿಗಳಲ್ಲಿ ಬೇವಿನ ಎಲೆಗಳು ಹಾಗೂ ಹೂವುಗಳಿಂದ ಅಲಂಕರಿಸಿದ ಗುರ್ಜಿಯನ್ನು ಹೊತ್ತು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಗುರ್ಜಿಗೆ ನೀರು ಹಾಕಿ, ಆರತಿ ಬೆಳಗಿ ನಮಸ್ಕರಿಸಿದರು. ಬಾರೋ ಬಾರೋ ಮಳೆರಾಯ, ತಂಪಾಗಿಸೋ ಧರೆಯನ್ನು ಎಂಬ ಗೀತೆಯನ್ನು ಹಾಡುತ್ತಾ ಮಳೆಗಾಗಿ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net