ಜನರ ಕೈ ಹಿಡಿದಿವೆ ಗ್ಯಾರಂಟಿ ಯೋಜನೆಗಳು

ಸಿದ್ದಾಪುರದ ಕಾಶಿವಿಶ್ವನಾಥ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ, ತಾಪಂ ಮಾಜಿ ಸದಸ್ಯ ಬಸವರಾಜ ನೀರಗಂಟಿ, ಮುಖಂಡರಾದ ಡಾ.ಕೆ.ಎನ್. ಪಾಟೀಲ್, ಹೀರೆಮಠದ ಉಮೇಶ ತಾತ ಇದ್ದರು.

Published on
ಸಿದ್ದಾಪುರ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಗ್ರಾಮದಲ್ಲಿ ಶ್ರೀ ಕಾಶಿವಿಶ್ವನಾಥ ದೇವಸ್ಥಾನ ಆವರಣದಲ್ಲಿ 50 ಲಕ್ಷ ರೂ. ಮೊತ್ತದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಈ ಹಿಂದೆ ನಮ್ಮ ಪಕ್ಷ ಹೇಳಿದ ಹಾಗೆ ನಡೆದಿದೆ. ಜನಪರ ಕಾರ್ಯಗಳನ್ನು ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ನಿರತರಾಗಿದ್ದಾರೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಮಂದಿರದ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಶೀಘ್ರವೇ ಭವ್ಯ ಭವನ ನಿರ್ಮಾಣವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ನೀರಗಂಟಿ, ಮುಖಂಡರಾದ ಡಾ.ಕೆ.ಎನ್. ಪಾಟೀಲ್, ಹೀರೆಮಠದ ಉಮೇಶ ತಾತ, ಜನಗಂಡೆಪ್ಪ ಪೂಜಾರ, ಅಬ್ದುಲ್ ರೌಫ್, ಬೀರಪ್ಪ, ನಾಗರಾಜ್ ಕರ್ಕಿಹಳ್ಳಿ, ಮಲ್ಲಪ್ಪ ಹುಡೇದ್, ಶರಣೆಗೌಡ ಬುದಗುಂಪಾ, ಗೋಣೆಪ್ಪ ಹುಡೇದ್, ಮಾರುತಿ ಮೈನಳ್ಳಿ, ಬಸವರಾಜ್ ಚಾಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net