ಮೃತ ಲಾನುಭವಿಗಳ ಪತ್ತೆಗೆ ಸರ್ವೇ ಕೈಗೊಳ್ಳಿ

ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ತಾಲೂಕಾಧ್ಯಕ್ಷ ಡಾ.ಕೆ. ವೆಂಕಟೇಶಬಾಬು ಸೋಮವಾರ ಮಾತನಾಡಿದರು. ಜಿಲ್ಲಾ ಸದಸ್ಯ ಆನಂದ ಹಾಸಲ್ಕರ್, ತಾಪಂ ಇಒ ರಾಮರೆಡ್ಡಿ ಪಾಟೀಲ್ ಇತರರಿದ್ದರು.
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ತಾಲೂಕಾಧ್ಯಕ್ಷ ಡಾ.ಕೆ. ವೆಂಕಟೇಶಬಾಬು ಸೋಮವಾರ ಮಾತನಾಡಿದರು. ಜಿಲ್ಲಾ ಸದಸ್ಯ ಆನಂದ ಹಾಸಲ್ಕರ್, ತಾಪಂ ಇಒ ರಾಮರೆಡ್ಡಿ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ಸೂಚನೆ
ಗಂಗಾವತಿ: ಮೃತಪಟ್ಟ ಗೃಹಲಕ್ಷ್ಮಿ ಯೋಜನೆ ಲಾನುಭವಿಗಳ ಪಟ್ಟಿಯನ್ನು ಅಧಿಕಾರಿಗಳು ತಯಾರಿಸಬೇಕಿದ್ದು, ಅಗತ್ಯಬಿದ್ದಲ್ಲಿ ಸರ್ವೇ ಕೈಗೊಳ್ಳುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ತಿಳಿಸಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಮೃತ ಲಾನುಭವಿಗಳಿಗೆ ಹಣ ಹಾಕುವುದು ಅಪರಾಧ. ಈ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೃತಪಟ್ಟ ಲಾನುಭವಿಗಳ ಪಟ್ಟಿ ತಯಾರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಕೈಗೊಳ್ಳಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು. ಕೆಲ ಲಾನುಭವಿಗಳಿಗೆ ಹಣ ಬಂದಿಲ್ಲ ಎಂದು ದೂರುಗಳು ಬಂದಿದ್ದು, ತತ್ರಾಂಶದಲ್ಲಿ ಪರಿಶೀಲಿಸಬೇಕೆಂದು ಸೂಚಿಸಿದರು.
ಶಕ್ತಿ ಯೋಜನೆಯಡಿ ಲಾನುಭವಿಗಳಿಗೆ ಸಂಚಾರ ಭಾಗ್ಯವಿದ್ದರೂ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾವಿಲ್ಲದೆ ಭದ್ರತೆ ಇದೆ. ಶೌಚಗೃಹಗಳು ಸುಸ್ಥಿತಿಯಲ್ಲಿಲ್ಲ. ಸಭೆಗೆ ಕೆಕೆಆರ್‌ಟಿಸಿ ಸ್ಥಳೀಯ ಘಟಕದ ವ್ಯವಸ್ಥಾಪಕ ಬರುತ್ತಿಲ್ಲ. ಸಭೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಕೆಕೆಆರ್‌ಆರ್‌ಟಿಸಿ ಸಹಾಯಕ ನಾಗರಾಜ ಪೂಜಾರ್‌ಗೆ ಸಮಿತಿ ಜಿಲ್ಲಾ ಸದಸ್ಯ ಆನಂದ ಹಾಸಲ್ಕರ್, ತಾಲೂಕು ಸದಸ್ಯ ಪರಶುರಾಮ್ ಕಿರಿಕಿರಿ ತಿಳಿಸಿದರು.
ಜೆಸ್ಕಾಂ ಎಇಇ ಮಂಜುನಾಥ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ 60,854 ಲಾನುಭವಿಗಳಿದ್ದು, 59,001 ಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಸ್‌ಟಾವೇರ್ ತೊಂದರೆಯಿಂದ ಕೆಲ ಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದರು. ಪುನಃ ಸರಿಪಡಿಸಲಾಗಿದೆ ಎಂದರು.
ಸಭೆಯಲ್ಲಿ ಅನ್ನಭಾಗ್ಯ ಮತ್ತು ಯುವನಿಧಿ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ಗ್ಯಾರಂಟಿ ಯೋಜನೆಯಿಂದ ಹೊರಗುಳಿದ ಲಾನುಭವಿಗಳಿಗೆ ಅವಕಾಶ ಕಲ್ಪಿಸುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ. ಖಾದ್ರಿ, ತಾಪಂ ಇಒ ರಾಮರೆಡ್ಡಿ ಪಾಟೀಲ್ ಹಾಗೂ ಸಮಿತಿ ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net