ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮೃತರಾಗಿದ್ದು, 1,06,922 ಜನರ ಮರಣ ವಿವರ ಸಕಾಲಕ್ಕೆ ಲಭ್ಯವಾಗದ ಕಾರಣ ಹಲವು ತಿಂಗಳು ಅವರ ಖಾತೆಗೆ ನೇರವಾಗಿ ಹಣ ಡಿಬಿಟಿ ಆಗಿದೆ. ಆ ಮೊತ್ತ 114.53 ಕೋಟಿ ರೂ. ಇದ್ದು, ಆಯಾ ಜಿಲ್ಲಾವಾರು ಅನರ್ಹರ ಹೆಸರು ಹಾಗೂ ಖಾತೆಗೆ ಜಮಾ ಆದ ಮೊತ್ತ ಪ್ರಮಾಣ ವಿವರ ಕಳಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಆರು ಸಾವಿರ ಅನರ್ಹರ ಖಾತೆಗೆ ಹಣ ಪಾವತಿಯಾಗಿದೆ. ಆದರೆ, ಖಾತೆಗೆ ಬಂದ ಹಣವನ್ನು ಮರಣ ಹೊಂದಿದವರ ವಾರಸುದಾರರು ಈಗಾಗಲೇ ಬಳಕೆ ಮಾಡಿದ್ದಾರೆ. ಕುಟುಂಬದಲ್ಲಿ ನಾಲ್ಕೆ$ದು ಜನರಿದ್ದಲ್ಲಿ ಯಜಮಾನಿ ಮರಣ ಹೊಂದಿದರೂ ಬಾಕಿ ಮಹಿಳೆಯರ ಪೈಕಿ ಹಿರಿಯರು ಬಿಪಿಎಲ್ ವಾರಸುದಾರರಾಗುತ್ತಿದ್ದಾರೆ. ಯೋಜನೆ ನಿಯಮಾನುಸಾರ ಅವರೂ ಗೃಹಲಕ್ಷ್ಮಿಗೆ ಅರ್ಹರಿದ್ದು ಹಣ ಪಡೆದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಇನ್ನು ಕೆಲವರು ಹಣ ಬಳಸಿಕೊಂಡಿದ್ದು, ಮತ್ತೆ ಪಾವತಿಸುವಂತೆ ಹೇಳುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.