ದರ ಕುಸಿತ, ಕುರಿ ಪಾಲಾದ ಪಾಲಕ್

ಕನಕಗಿರಿ ತಾಲೂಕಿನ ನಿರಲೂಟಿ ಗ್ರಾಮದ ರೈತ ಯಮನೂರಪ್ಪ ಮಾರುಕಟ್ಟೆಯಲ್ಲಿ ದರವಿಲ್ಲದಕ್ಕೆ ತಾನು ಬೆಳೆದಿದ್ದ ಪಾಲಕ್ ಸೊಪ್ಪನ್ನು ಭಾನುವಾರ ಕುರಿ ಬಿಟ್ಟು ಮೇಯಿಸುತ್ತಿರುವುದು.
ಕನಕಗಿರಿ ತಾಲೂಕಿನ ನಿರಲೂಟಿ ಗ್ರಾಮದ ರೈತ ಯಮನೂರಪ್ಪ ಮಾರುಕಟ್ಟೆಯಲ್ಲಿ ದರವಿಲ್ಲದಕ್ಕೆ ತಾನು ಬೆಳೆದಿದ್ದ ಪಾಲಕ್ ಸೊಪ್ಪನ್ನು ಭಾನುವಾರ ಕುರಿ ಬಿಟ್ಟು ಮೇಯಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆಯಲ್ಲಿ ಸೊಪ್ಪಿನ ದರ ಕುಸಿತ
  • ಮಾರುಕಟ್ಟೆ ಬದಲು ಓಣಿ ಓಣಿ ತಿರುಗಿ ಮಾರಾಟ
ಕನಕಗಿರಿ: ಮಾರುಕಟ್ಟೆಯಲ್ಲಿ ಸೊಪ್ಪಿನ ದರ ಕುಸಿತಗೊಂಡಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಪಾಲಾಕ್ ಸೊಪ್ಪನ್ನು ತಾಲೂಕಿನ ನಿರ್ಲೂಟಿ ಗ್ರಾಮದ ರೈತರೊಬ್ಬರು ಭಾನುವಾರ ಕುರಿಗಳನ್ನು ಬಿಟ್ಟು ಮೇಯಿಸಿದ್ದಾರೆ.
ಸೊಪ್ಪು ಬೆಳೆದು ಜಿಲ್ಲೆಯಲ್ಲದೇ ನೆರೆಯ ಜಿಲ್ಲೆವರೆಗೂ ಸರಬರಾಜು ಮಾಡುವ ಮೂಲಕ ಹೆಸರು ಮಾಡಿರುವ ನಿರಲೂಟಿ ಗ್ರಾಮದ ಯಮನೂರಪ್ಪ, ತನ್ನ 2 ಗುಂಟೆ ಜಮೀನಿನಲ್ಲಿ ಪಾಲಕ್ ಸೊಪ್ಪು ಬೆಳೆದಿದ್ದರು. ಹವಾಮಾನ ಬದಲಾವಣೆ, ಅನೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ನಾನಾ ಸೊಪ್ಪು ಬೆಳೆದಿದ್ದರಿಂದ ದರ ಕುಸಿತವಾಗಿದೆ. ಇದರಿಂದ ಕಂಗೆಟ್ಟ ರೈತ, ಕುರಿ ಮೇಯಿಸಲು ಹೋಲವನ್ನು ಕೊಟ್ಟಿದ್ದಾರೆ.
ಕೊತ್ತಂಬರಿ, ಪಾಲಕ್, ಮೆಂತೆ ಸೇರಿದಂತೆ ನಾನಾ ತರಹದ ಸೊಪ್ಪು 1 ಸೂಡಿಗೆ 1 ರೂ.. ಮಾರಾಟವಾಗುತ್ತಿದ್ದು, ಇದನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದರೂ ಲಾಭ ಸಿಗದ ಕಾರಣ ಕುರಿ ಬಿಟ್ಟು ಮೇಯಿಸುವ ತೀರ್ಮಾನ ಮಾಡಿದ್ದಾರೆ. ಇದರಿಂದ ಬೇಸತ್ತ ಬಹುತೇಕ ಸೊಪ್ಪು ಬೆಳೆಗಾರರು ಮಾರುಕಟ್ಟೆ ಬದಲು ಓಣಿ ಓಣಿ ತಿರುಗಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದ ರೈತರು, ಸೂಕ್ತ ಬೆಲೆ ಸಿಗದ ಕಾರಣ ಅಲ್ಲಿಯೇ ಸೊಪ್ಪು ಬಿಟ್ಟು ವಾಪಸ್ ತೆರಳುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net