

ಪ್ರಮುಖ ಮುಖ್ಯಾಂಶಗಳು
ನಗರದ ಪ್ರಮುಖ ವೃತ್ತಗಳಲ್ಲಿನ ಟ್ರಾಫಿಕ್ ಸಿಗ್ನಲ್ನಲ್ಲಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ಗುರುವಾರ ರಾತ್ರಿ ಬಸವೇಶ್ವರ ವೃತ್ತದಲ್ಲಿನ ಟ್ರಾಫಿಕ್ ಸಿಗ್ನಲ್ನಲ್ಲಿ ಹಸಿರು ಹೊದಿಕೆ ಹಾಕಿದ್ದು. ಶುಕ್ರವಾರ ಸಂಜೆ ಅಶೋಕ ವೃತ್ತದಲ್ಲಿ ಗ್ರೀನ್ ಮ್ಯಾಟ್ ಹಾಕಿ ವಾಹನ ಸವಾರರಿಗೆ ಬಿಸಿಲಿನಿಂದ ರಕ್ಷಣೆ ಮಾಡಲಾಗುವುದು. ನಗರದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಲು ಚರ್ಚಿಸಿ ಅದಕ್ಕೂ ಕ್ರಮ ಕೈಗೊಳ್ಳಲಾಗುವುದು